ಆವೇಶದಲ್ಲಿ ಮಾತನಾಡಿದ್ದಕ್ಕೆ ಸಚಿವರು ಮಾತನಾಡಿದ್ದಾರೆ : ಆಂಜನೇಯ ಬೋವಿ ಸ್ಪಷ್ಟನೆ.

ಆವೇಶದಲ್ಲಿ ಮಾತನಾಡಿದ್ದಕ್ಕೆ ಸಚಿವರು ಮಾತನಾಡಿದ್ದಾರೆ : ಆಂಜನೇಯ ಬೋವಿ ಸ್ಪಷ್ಟನೆ.
ಕೊಪ್ಪಳ: ಸಿದ್ದರಾಮೇಶ್ವರ ಜಯಂತಿ ಹಾಗೂ ಜಾತ್ರೆಯ ಕಾರ್ಯಕ್ರಮದ ನಿಮಿತ್ತ ಸಚಿವ ಶಿವರಾಜ್ ತಂಗಡಗಿಯವರ ಕಚೇರಿಗೆ ಹೋದಾಗ ನಾನು ಸಚಿವರಿಗೆ ಆವೇಶದಲ್ಲಿ ಮಾತನಾಡಿದ್ದಕ್ಕೆ ಸಚಿವ ತಂಗಡಗಿ ಅವರು ನನಗೆ ಮಾತನಾಡಿದರು ಎಂದು ಬೋವಿ ಸಮಾಜದ ಯುವ ಮುಖಂಡ ಆಂಜನೇಯ ಭೋವಿ ಸ್ಪಷ್ಟನೆ ನೀಡಿದರು.
ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗುರು ಅವರು ನಾವು ಸಚಿವರು ನಡುವಿನ ಮಾತಿನ ಭರಾಟೆಯ
ವಿಷಯದ ವಿಡಿಯೋ ವೈರಲ್ ಮಾಡಿದ್ದು ಇದು ನಮ್ಮ ಸಮಾಜದ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ನಮ್ಮ ಸಮುದಾಯದ ಹಿರಿಯರು ಅವರು ನಮಗೆ ಮಾತನಾಡುವ ಹಕ್ಕಿದೆ ಅವರು ಊಟಕ್ಕೆ ಇಂತಿಷ್ಟು ದೇಣಿಗೆ ನೀಡುತ್ತೇನೆ, ಕಟ್ಟೆ ಕಾಮಗಾರಿ ಅದರ ಅಂದಾಜು ವೆಚ್ಚವನ್ನು ತೆಗೆದುಕೊಂಡು ಬರಲು ಹೇಳಿದರು ಆಗ ನಾನು ಆವೇಶದಲ್ಲಿ ಏನು ಮಾತನಾಡಿದೆ ಅದಕ್ಕೆ ಸಚಿವರು ನನಗೆ ಮಾತನಾಡಿದರು ವಿನಹ ಇದರಲ್ಲಿ ಏನು ಇಲ್ಲ ಆದರೆ ಇದನ್ನೇ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೇಸುಗುರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಅವರು ಇಲ್ಲಿಗೆ ಪತ್ರಿಕಾಗೋಷ್ಠಿಗೆ ನನ್ನನ್ನು ಯಾರು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ನಾನೇ ಸ್ವಯಂ ಪ್ರೇರಿತನಾಗಿ ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ.
ಭೋವಿ ಸಮಾಜದ ಮುಖಂಡ ಬಸವರಾಜ್ ಭೋವಿ ಮಾತನಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗುರು ಅವರು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಚುನಾವಣೆ ಸ್ಪರ್ಧಿಸಿದಾಗ ಅವರ ಗಾಡಿಗಳಿಗೆ ಪೆಟ್ರೋಲ್ ಡೀಸೆಲ್ ಹಾಕಲು ಅವರ ಬಳಿಯ ಹಣವಿರಲಿಲ್ಲ ಈಗ ಇಷ್ಟು ಆಸ್ತಿ ಅಂತಸ್ತು ಹೇಗೆ ಬಂತು ಎಂದು ಮಾತನಾಡುವುದು ಸರಿಯಲ್ಲ ಅವರ ಸಹೋದರರು ವಿವಿಧ ಉದ್ಯಮಗಳಿಂದ ದುಡಿಯುತ್ತಾರೆ ಆಗ ಪ್ರತಿ ವರ್ಷ ವಿವಿಧ ದುಡಿಮೆಯಿಂದ ಆರ್ಥಿಕತೆ ಬೆಳವಣಿಗೆ ಆಗುತ್ತದೆ ಅದು ಸಹಜ ಆದರೆ ದಡೇಸೂಗುರು ಮಾತನಾಡುವುದು ಅಸೂಯೆ ಭಾವನೆ ಎಂಬುದು ಗೋಚರಿಸುತ್ತದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಅತ್ಯಂತ ಎಚ್ಚರವಾಗಿ ಮಾತನಾಡಬೇಕು, ಇಂಥ ಹಗುರವಾದ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ರಾಜಕೀಯದಲ್ಲಿ ಒಬ್ಬರು ಇನ್ನೊಬ್ಬರನ್ನು ಬಗ್ಗೆ ಮಾತನಾಡುವುದು ಸಹಜ ಆದರೆ ಅವರ ವೈಯಕ್ತಿಕ ವಿಷಯಗಳನ್ನು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಸತ್ಯಪ್ಪ ಭೋವಿ ಗೌರಿಪುರ, ಯಮನೂರಪ್ಪ ಬೋವಿ, ವಿ. ಸೋಮಶೇಖರ್ ಬೋವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




