ಎಸ್.ಸಿ ಎಸ್.ಟಿ ಯೋಜನೆಗಳಿಗೆ ಅನುದಾನ ಸಿಗದಂತಾಗಿದೆ : ದ್ಯಾಮಣ್ಣ ಪೂಜಾರ

ಎಸ್.ಸಿ ಎಸ್.ಟಿ ಯೋಜನೆಗಳಿಗೆ ಅನುದಾನ ಸಿಗದಂತಾಗಿದೆ : ದ್ಯಾಮಣ್ಣ ಪೂಜಾರ
ಕೊಪ್ಪಳ : ಎಸ್.ಸಿ ಎಸ್. ಟಿ ಯೋಜನೆಗಳಿಗೆ ಸರಿಯಾದ ಸಮಯಕ್ಕೆ ಅನುದಾನ ಸಿಗದಂತಾಗಿದೆ ಎಂದು ದಲಿತ ವಿಮೋಚನಾ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಪೂಜಾರ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿವಾಹಗಳಿಗೆ ನೀಡುವ ಪ್ರೋತ್ಸಾಹಧನವನ್ನು ಸುಮಾರು ವರ್ಷಗಳಿಂದ ಮಂಜೂರು ಮಾಡಿರುವುದಿಲ್ಲ ದಿ. 03-02-2026ರಂದು ಸಂಘಟನೆ ವತಿಯಿಂದ ಅನುಧಾನ ಬಿಡುಗಡೆಗಾಗಿ ಮನವಿಯನ್ನು ಸಲ್ಲಿಸಿದ್ದು ಭಾಕಿ ಇರುವ ವಿವಿಧ ಸರಳ ವಿವಾಹ,ಅಂತರ್ಜಾತಿ ವಿವಾಹ (ಪರಿಶಿಷ್ಟ ಜಾತಿ)ದೇವದಾಸಿ ಮಕ್ಕಳ ವಿವಾಹ, ಒಳಪಂಗಡಗಳ ವಿವಾಹಗಳ ಪ್ರೋತ್ಸಾಹ ಧನ ರೂ.7.77 ಕೋಟಿ ರೂಪಾಯಿಗಳು ಭಾಕಿ ಇರುವ ಬಗ್ಗೆ ಉಪನಿರ್ದೇಶಕರು ಕೊಟ್ಟಿರುವ ಹಿಂಬರಹದಲ್ಲಿ ಪ್ರೋತ್ಸಾಹಧನ ಬಾಕಿ ಇರುವುದು ಉಲ್ಲೇಖಗೊಂಡಿರುತ್ತದೆ. ಸರಕಾರವು ‘ಮಿಸಲಿಟ್ಟ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಬೇರೆ ಇಲಾಖೆಯ ಕಾಮಗಾರಿಗಳಿಗೆ ವರ್ಗಾಹಿಸಿ ಬಳಸಿಕೊಳ್ಳುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಯೋಜನೆಗಳಿಗೆ ಸರಿಯಾದ ಸಮಯಕ್ಕೆ ಅನುಧಾನ ಸಿಗದಂತಾಗಿದೆ. ಕಾರಣ ಕೂಡಲೇ ಫಲಾನುಭವಿಗಳಿಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಬೇಕು, ಮನವಿಗೆ 15 ದಿನದ ಒಳಗಾಗಿ ಸ್ಪಂದಿಸದೇ ಇದ್ದ ಪಕ್ಷದಲ್ಲಿ ನಮ್ಮ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ವಿಮೋಚನಾ ಸೇನೆ ರಾಜ್ಯ ಉಪಾಧ್ಯಕ್ಷ ಎಸ್ ದುರ್ಗಪ್ಪ, ಜಿಲ್ಲಾಧ್ಯಕ್ಷ ರಮೇಶ್ ಸೋಮನಾಳ, ಅಲ್ಪಸಂಖ್ಯಾತರ ಅಧ್ಯಕ್ಷ ಕಮಲ್ ಪಾಶ, ಜಿಲ್ಲಾ ಉಪಾಧ್ಯಕ್ಷ ಮಾರುತಿ.ವಿ, ಯಲಬುರ್ಗಾ ತಾಲೂಕ ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.




