news

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ನೇಮಕವಾಗಲಿ-ಸುಬೆದಾರ್ ಮೇಜರ್ ಮನೋಜಕುಮಾರ್

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ನೇಮಕವಾಗಲಿ-ಸುಬೆದಾರ್ ಮೇಜರ್ ಮನೋಜಕುಮಾರ್

ಕೊಪ್ಪಳ– ಸೇನಾ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚೆಚ್ಚು ಸಕ್ರಿಯವಾಗಿ ಪಾಲ್ಗೋಂಡು ನೇಮಕಾತಿಯಾಗಿ ಎಂದು ಭಾರತೀಯ ಸೇನಾ ನೇಮಕಾತಿ ಬೆಳಗಾವಿಯ ಕಛೇರಿಯ ಸಹಾಯಕ ನೇಮಕಾತಿ ಅಧಿಕಾರಿ ಸುಬೆದಾರ್ ಮೇಜರ್ ಮನೋಜ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಸೇನಾ ನೇಮಕಾತಿಗೆ ಸಿದ್ಧತೆ ನಡೆಸುವದು ಹೇಗೆ ಅದಕ್ಕೆ ಇರಬೇಕಾದ ಅರ್ಹತೆಗಳ ಕುರಿತಂತೆ ಮಾಹಿತಿ ನೀಡಿದರು. ದಿನಾಂಕ ೧೮-೦೨-೨೦೨೬, ಬುಧವಾರದಂದು ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಬೆಳಗಾವಿಯ ಸಹಾಯಕ ನೇಮಕಾತಿಯ ಕಛೇರಿ ಂಖಔ ಃeಟಚಿgಚಿm (ಂಡಿmಥಿ ಖeಛಿಡಿuiಣmeಟಿಣ ಔಜಿಜಿiಛಿe) ಇವರ ಸಹಯೋಗದಲ್ಲಿ ನಡೆದ (ಸೇನೆಗೆ ನೇಮಕಾತಿ ಆಗುವದು ಹೇಗೆ) “ಊoತಿ ಣo ಂಡಿmಥಿ ಎoiಟಿ” ಕಾರ್ಯಕ್ರಮವನ್ನು ಕೊಪ್ಪಳ ಬೆಂಕಿನಗರದ ಸರಕಾರಿ ಪ್ರೌಢಶಾಲೆ, ಕಾಳಿದಾಸ ಪಿ.ಯು.ಕಾಲೇಜು, ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯಲಯ, ಸಿಂದೋಗಿಯ ಮುರಾರ್ಜಿ ಪಿ.ಯು ಕಾಲೇಜು, ಭಾಗ್ಯನಗರದ ಜ್ಞಾನ ಬಂದು ಶಾಲೆಗಳಿಗೆ ಬೇಟಿ ನೀಡಿ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಲಾಯಿತು.
ಬೆಳಗಾವಿಯ ಸಹಾಯಕ ನೇಮಕಾತಿಯ ಕಛೇರಿಯ ಹವಾಲ್ದಾರ್ ಬ್ರಾಜ್ ಕಿಶೋರ್ ಮಾತನಾಡಿ ಭಾರತೀಯ ಸೇನಾ ನೇಮಕಾತಿಯ ರ‍್ಯಾಲಿಗಳಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಕಡಿಮೆ ನೇಮಕಾತಿ ಆಗುತ್ತಿರುವದು ವಿಷಾದನಿಯ ಆದ್ದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವಲ್ಲಿ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದ ಸಹಕಾರ ಅಗತ್ಯವಿದೆ ತಾವೆಲ್ಲರೂ ಆ ನಿಟ್ಟಿನಲ್ಲಿ ಪ್ರಯತ್ನಿಸಿರಿ ಮುಂದುವರೆದು ಮಾತನಾಡಿ ಸೇನಾ ನೇಮಕಾತಿಗೆ ಕೇವಲ ಒಂದೇ ಬಾರಿಗೆ ಪ್ರಯತ್ನಿಸಿ ವಿಫಲವಾದ ತಕ್ಷಣ ನೇಮಕಾತಿ ಪ್ರಯತ್ನದಿಂದ ಹಿಮ್ಮುಖವಾಗದೆ ನಿರಂತರವಾಗಿ ಪ್ರಯತ್ನಿಸಿದರೆ ನೇಮಕಾತಿ ಆಗುವದು ಖಚಿತ ಎಂದು ಹೇಳಿದರು.
ಈ ಸಂದರ್ಬದಲ್ಲಿ ಮಾತನಾಡಿದ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಾರುತಿ ಗೊಂದಿ ನಮ್ಮ ಭಾಗದ ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ನಡೆಯುವ ಸೇನಾ ನೇಮಕಾತಿಯ ಸದುಪಯೋಗ ಪಡೆದುಕೊಂಡು ಹೆಚ್ಚು ನೇಮಕಾತಿಯಾಗಿರಿ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಗಳ ಮುಖ್ಯೋಪಾಧ್ಯಯರಾದ ರಾಮಣ್ಣ, ಶೇಖರ, ಕಾಳಿದಾಸ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್, ಜ್ಞಾನ ಬಂದು ಕಾಲೇಜಿನ ರವೀಂದ್ರ.ಎ, ಮುರಾರ್ಜಿ ಪಿ.ಯು ಕಾಲೇಜಿನ ಂಓಔ ಪರಶುರಾಮ ಹಾಗೂ ಮಾಜಿ ಸೈನಿಕರು ಹಾಗೂ ವೀರನಾರಿಯರು ಮತ್ತು ಎನ್.ಸಿ.ಸಿ.ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಉಪನ್ಯಾಸ ಕಾರ್ಯಕ್ರಮದ ಆಯೋಜನೆ ಮತ್ತು ಉಸ್ತುವಾರಿಯನ್ನು ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘ ವಹಿಸಿಕೊಂಡಿತ್ತು. ಈ ಸಂದರ್ಬದಲ್ಲಿ ಖಜಾಂಚಿ ಇಂದುಧರ ಸೊಪ್ಪಿಮಠ ಹಾಗೂ ಸದಸ್ಯರಾದ ಹೇಮಂತಪ್ಪ, ವಾಸಪ್ಪ ಚಲ್ಲಾ, ಸಿದ್ದಲಿಂಗಪ್ಪ,ರಮೇಶ್ ಬಲ್ಲೋಟಗಿ ಉಪಸ್ಥಿತರಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಾರುತಿ ಗೊಂದಿ, ಖಜಾಂಚಿ ಇಂದುಧರ ಸೊಪ್ಪಿಮಠ ಹಾಗೂ ಸದಸ್ಯರಾದ ಶ್ರೀ ಹೇಮಂತಪ್ಪ, ವಾಸಪ್ಪ ಚಲ್ಲಾ, ಸಿದ್ದಲಿಂಗಪ್ಪ, ರಮೇಶ್ ಬಲ್ಲೋಟಗಿ ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button