ಕೊಪ್ಪಳ-ಭಾಗ್ಯನಗರ ಬಂದ್ ಸಂಪೂರ್ಣ ಯಶಸ್ವಿ – ಅಂಗಡಿ-ಮುಗ್ಗಟ್ಟು ಮುಚ್ಚಿ ಬೆಂಬಲ – ಬಾಧಿತ ಗ್ರಾಮಸ್ಥರಿಂದ ಹೋರಾಟಕ್ಕೆ ಬೆಂಬಲ

ಕೊಪ್ಪಳ-ಭಾಗ್ಯನಗರ ಬಂದ್ ಸಂಪೂರ್ಣ ಯಶಸ್ವಿ
– ಅಂಗಡಿ-ಮುಗ್ಗಟ್ಟು ಮುಚ್ಚಿ ಬೆಂಬಲ
– ಬಾಧಿತ ಗ್ರಾಮಸ್ಥರಿಂದ ಹೋರಾಟಕ್ಕೆ ಬೆಂಬಲ
ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ತೋಂಟದ ಸಿದ್ಧರಾಮೇಶ್ವರ ಸ್ವಾಮೀಜಿ, ಜೇವರಗಿ ಮಠದ ಸಿದ್ಧಬಸವ ಕಬೀರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಶಿಕ್ಷಣ ಉಳಿಸಿ ಸಮಿತಿಯ ವಿ.ಎನ್.ರಾಜಶೇಖರ, ಹೋರಾಟಗಾರ ಎ.ಟಿ.ರಾಮಸ್ವಾಮಿ, ರೈತ ಸಂಘಟನೆ ಮುಖಂಡ ಚಾಮರಸ ಮಾಲೀ ಪಾಟೀಲ್, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ, ಮಾತನಾಡಿದರು. ಹೋರಾಟ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರ, ಡಿ.ಎಚ್.ಪೂಜಾರ, ರಮೇಶ ತುಪ್ಪದ, ಶರಣು ಗಡ್ಡಿ, ಶರಣು ಪಾಟೀಲ್, ಶರಣು ಶೆಟ್ಟರ್ ಇದ್ದರು. ಗಾಯಕ ಸದಾಶಿವ ಪಾಟೀಲ್, ಸಾವಿತ್ರಿ ಮುಜುಮದಾರ ವಿರಚಿತ ಕೊಪ್ಪಳ ಪರಿಸ್ಥಿತಿಯ ಕವಿತೆ ಹಾಡಿದರು. ಕೆ.ಬಿ.ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕ ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು.
————–
ಕೋಟ್::::
ರಾಜ್ಯ- ಕೇಂದ್ರ ಸರಕಾರಗಳು ರೈತರ ಕೂಗು- ನೋವು ಅರ್ಥ ಮಾಡಿಕೊಳ್ಳಬೇಕು. ನಾನು ಬಾಧಿತ ಗ್ರಾಮಗಳಿಗೆ ಸ್ವತಃ ‘ೇಟಿ ನೀಡಿದ್ದೇನೆ. ಅಲ್ಲಿನ ಜನರಿಗೆ ಯಾವೊಬ್ಬ ಜನಪ್ರತಿನಿಧಿಗಳು ನಮ್ಮ ನೋವು ಕೇಳುತ್ತಿಲ್ಲ ಎಂಬ ನೋವಿದೆ. ಕೊಪ್ಪಳ ನಗರದ ಎಲ್ಲ ಅಂಗಡಿ ಬಂದ್ ಇವೆ. ಇದನ್ನು ಸರಕಾರ ಮತ್ತು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಕೊಪ್ಪಳ ಜನರು ಕಾರ್ಖಾನೆ ಪರ ಇರುವ ಜನ ಪ್ರತಿನಿಧಿಗಳಿಗೆ ಬಹಿಷ್ಕಾರ ಹಾಕಬೇಕು. ನಮ್ಮದೇ ಪ್ರತಿನಿಧಿಗೆ ಮತ ನೀಡುವ ಮೂಲಕ ನಮ್ಮ ಹೋರಾಟ ಮುಂದುವರೆಸಬೇಕು. ತಾರ್ಕಿಕ ಅಂತ್ಯದ ವರೆಗೆ ಹೋರಾಟ ಮುಂದುವರೆಯಲಿದೆ.
– ಸಾಣೇಯಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
———
ಕೋಟ್:::::
ಕೈಗಾರಿಕೆಯಿಂದ ಬರುವ ಹಾರು ಬೂದಿ, ಬೆಳೆ ಮೇಲೆ ಬಿದ್ದು ಶೇ.30 ರಷ್ಟು ಇಳುವರಿ ಕಡಿಮೆ ಆಗುತ್ತಿದೆ. ಇಂಥ ಮೇವು ತಿನ್ನುವ ಜಾನುವಾರು ಮೃತಪಡುತ್ತಿವೆ. ಬಸಾಪೂರ ಕೆರೆ ಯನ್ನು ಸರಕಾರಗಳು ಬಂಡವಾಳಶಾಹಿಗಳಿಗೆ ಗುತ್ತಿಗೆ ನೀಡಿವೆ. ಕೆರೆ ಎಂದರೆ ನಮ್ಮ ತಾಯಿ. ನಮ್ಮ ತಾಯಿಯನ್ನು ಗುತ್ತಿಗೆ ನೀಡಲು ಸಾ‘್ಯವೆ? ಕೈಗಾರಿಕೆ ಸಚಿವರು, ಮುಖ್ಯಮಂತ್ರಿ ಇಲ್ಲಿನ ಜನರ ಸ್ಥಿತಿ ಬಂದು ನೋಡಬೇಕು. ಶಾಸಕ ರಾಘವೇಂದ್ರ ಹಿಟ್ನಾಳ ಇಷ್ಟೊಂದು ತಾಳ್ಮೆಯಿಂದ ಇರಬಾರದು. ಅನೇಕ ಜನಪ್ರತಿನಿಧಿಗಳು ಎಂಜಲು ಕಾಸಿಗೆ, ಜೇಬು ತುಂಬಿಸಿಕೊಳ್ಳಲು ಬಂಡವಾಳ ಹೂಡುವವರ ಮುಂದೆ ಕೈಕಟ್ಟಿ ಕುಳಿತಿದ್ದಾರೆ. ಜನ ಶಕ್ತಿ ಮುಂದೆ ಯಾವ ಶಕ್ತಿಯೂ ಉಳಿಯಲ್ಲ. ಜನ ದಂಗೆ ಎದ್ದೇಳುವ ಸಂದ‘ರ್ ಬರುವಂತೆ ಆಗದಿರಲಿ.
– ಎ.ಟಿ.ರಾಮಸ್ವಾಮಿ, ಹೋರಾಟಗಾರ
———-
ಕೋಟ್::::
ಸ್ವಾಮೀಜಿಗಳು ಮತ್ತು ಜನಪ್ರತಿನಿಧಿಗಳು ದುಡ್ಡು, ಕಾಣಿಕೆ ನೋಡಿ ಹಣವಂತರ ಜೊತೆಗೆ ನಿಲ್ಲಬಾರದು. ಜನ ಹಾಕುವ ಭಿಕ್ಷೆಯಲ್ಲಿ ಸ್ವಾಮೀಜಿಗಳು ಬದುಕುತ್ತಾರೆ. ಜನರು ಹಾಕುವ ಮತ ಭಿಕ್ಷೆಯಿಂದ ರಾಜಕಾರಣಿಗಳು ಬದುಕುತ್ತಿದ್ದಾರೆ. ಜನರ ಕಷ್ಟ ಅರ್ಥ ಮಾಡಿಕೊಳ್ಳದ ಜನ ಪ್ರತಿನಿಧಿಗಳು ಯಾರಿಗೆ ಬೇಕು? ಇಲ್ಲಿ ಶಾಸಕರು ಸು‘ಾರಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ನಮ್ಮ ಹೆಣದ ಮೇಲೆ ರಾಜಕಾರಣ ಮಾಡಲಿ. ಇವತ್ತು ಹಾಲಿ, ಮಾಜಿ ಶಾಸಕ- ಸಂಸದರು ವೇದಿಕೆಗೆ ಸುಮ್ಮನೇ ಬಂದಿಲ್ಲ. ರೈತರು, ಜನರ ಸಂಘಟನೆ ನೋಡಿ ಬಂದಿದ್ದಾರೆ. ರಾಜ್ಯ-ಕೇಂದ್ರ ಸರಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ನಮ್ಮ ಕೆಲಸ ನಾವು ಮಾಡುತ್ತೇವೆ.
– ಸಿದ್ಧಬಸವ ಕಬೀರ ಮಹಾಸ್ವಾಮೀಜಿ, ಜೇವರಗಿ ಮಠ
—————
ಕೋಟ್:
ಹೋರಾಟ ಆರಂ‘ವಾಗಿ 117 ದಿನ ಆಗಿದ್ದರೂ ರಾಜ್ಯದ ಯಾವೋಬ್ಬ ಜನಪ್ರತಿನಿಧಿ ನಿಮ್ಮ ನೋವು ಕೇಳಿಲ್ಲ. ಇದು ಇಡೀ ಪ್ರಜಾತಂತ್ರ ವ್ಯವಸ್ಥೆ ನಾಚಿಕೆ ಪಡುವ ವಿಷಯ. ಎಲ್ಲ ಸರಕಾರಗಳು ಕ್ರೂರಿಗಳಾಗಿದ್ದಾರೆ. ಎಲ್ಲ 224 ಶಾಸಕರು, ಲೋಕಸಭೆ ಸದಸ್ಯರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಸರಕಾರಗಳು ಪ್ರಜೆಗಳ ಪ್ರತಿನಿಧಿಗಳಾಗಿಲ್ಲ. ಬಂಡವಾಳಶಾಹಿಗಳ ಕೈಗೊಂಬೆ ಆಗಿದ್ದಾರೆ. ಜನರ ಹೆಣದ ಮೇಲೆ ಮಹಲ್ ಕಟ್ಟುತ್ತಾರೆ. ಎಲ್ಲ ಶಾಸಕರು ಹೃದಯ ಹೀನರಾಗಿದ್ದಾರೆ. ಜನರು ಒಂದಾದರೆ ಎಂಥವರನ್ನೂ ಬಗ್ಗಿಸಬಹುದು. ಪ್ರತಿಯೊಂದು ಹಳ್ಳಿಯಲ್ಲಿ ಹೋರಾಟ ರೂಪುಗೊಳ್ಳಬೇಕಿದೆ. ಉಸಿರಾಡಲು ಗಾಳಿ- ನೀರಿಗೆ ಹೋರಾಟ ಮಾಡುವಂತಾಗಿದೆ. ಇದನ್ನೇ ಕ್ರೂರ ಬಂಡವಾಳಶಾಹಿ ಎನ್ನಲಾಗುತ್ತದೆ.
– ವಿ.ಎನ್.ರಾಜಶೇಖರ, ಶಿಕ್ಷಣ ಉಳಿಸಿ ಸಮಿತಿ
——————-
ಕೋಟ್::::::
ಕೊಪ್ಪಳ ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರು ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿದ್ದೆವು. ಎಲ್ಲ ಪರಿಸರ ಹಾನಿಕಾರಕ ಕಾರ್ಖಾನೆ ಬಂದ್ ಮಾಡುವಂತೆ ಮನವಿ ಮಾಡಿದ್ದೆವು. ಸಿಎಂ ಕೂಡಲೇ ಎಲ್ಲ ಕೆಲಸ ಬಂದ್ ಅಮಾಡುವಂತೆ ಹೇಳಿದ್ದರು. ಕೊಪ್ಪಳದ ಪ್ರತಿಯೊಬ್ಬ ಜನರು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ. ಕೆ. ರಾಜಶೇಕರ ಹಿಟ್ನಾಳ, ಸಂಸದ
ಕೋಟ್:
ಕಾರ್ಖಾನೆ ವಿರೋಧಿ ಹೋರಾಟ ಜನಾಂದೋಲನ ಆಗಿ ರೂಪುಗೊಳ್ಳಬೇಕು. ಇಡೀ ರಾಜ್ಯದ ಜನರು ಕೊಪ್ಪಳ ಜನರಿಗೆ ಬೆಂಬಲ ನೀಡುವಂತೆ ಆಗಬೇಕು. ಆಗ ಹೋರಾಟ ಯಶಸ್ವಿಯಾಗಲಿದೆ. ನ್ಯಾಯಾ ಸಿಗುವವರೆಗೆ ಹೋರಾಟ ಮುಂದುವರೆಯಬೇಕು. ಬಂಡವಾಳ ಹೂಡುವವರಿಗೆ ಹೋರಾಟ ಬಗ್ಗು ಬಡಿಯುವ ಎಲ್ಲ ತಂತ್ರ ಗೊತ್ತಿರುತ್ತದೆ. ಯಾರಾದರೂ ಬಂದು ಏನಾದರೂ ಆಶ್ವಾಸನೆ ಕೊಟ್ಟರೆ ಮರುಳಾಗಬಾರದು. ಬಂಡವಾಳಶಾಹಿಗಳ ತಂತ್ರಗಾರಿಕೆಗೆ ಜನರು ಜಗ್ಗಬಾರದು.
ಶ್ರೀ ಸಿದ್ದರಾಮ ತೋಂಟದಾರ್ಯ ಸ್ವಾಮಿಗಳು, ಗದಗ
————
ಕೋಟ್:
ಅಲ್ಟ್ರಾಟೆಕ್ ಕಾರ್ಖಾನೆ ಸ್ಥಾಪನೆ ವೇಳೆ ನಾನು ಶಾಸಕನಾಗಿದ್ದೆ. ಆಗ ನನ್ನ ಜೊತೆ ಯಾರೂ ಬರಲಿಲ್ಲ. ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಅವೆಲ್ಲ ಮತ್ತೇ ನೆನಪು ಮಾಡುವುದು ಬೇಡ. ಕಾರ್ಖಾನೆ ಬೇಡ ಎಂದು ಮತ್ತೊಮ್ಮೆ ಸಿಎಂ ಭೇಟಿ ಮಾಡೋಣ. ಕಾರ್ಖಾನೆ ವಿರೋ‘ ಹೋರಾಟ ಮುಂದುವರೆಸೋಣ
– ಸಂಗಣ್ಣ ಕರಡಿ, ಮಾಜಿ ಸಂಸದ
———–
ಕೋಟ್:
ಕೊಪ್ಪಳ ಸುತ್ತಮುತ್ತ ಕಳೆದ 1995ಕ್ಕಿಂತ ಮುಂಚೆ ಕಾರ್ಖಾನೆಗಳು ರೈತರಿಂದ ಭೂಮಿ ಖರೀದಿ ಮಾಡಿವೆ. ಆಗ ಯಾರಿಗೂ ಪರಿಸರ ಹಾನಿ ಆಗುತ್ತದೆ ಎಂಬ ಕಲ್ಪನೆ ಇರಲಿಲ್ಲ. ಸ್ಪಾಂಜ್ ಐರನ್ ಕಂಪನಿ ಬಂದ ನಂತರ ತೊಂದರೆ ಹೆಚ್ಚಾಗಿದೆ. ಈ ಎಲ್ಲ ಕಂಪನಿಗೆ ಸಾಕಷ್ಟು ಹಿಂದೆಯೇ ಗಣಿಗಾರಿಕೆ ಪರವಾನಗಿ ಸಿಕ್ಕಿದೆ. ನಾಲ್ಕು ಜನ ಕೂಗಾಡಿ ಭಾಷಣ ನಿಲ್ಲಿಸಿದರೆ ಹೋರಾಟ ಸಕ್ಸಸ್ ಆಯ್ತು ಅಂತಾ ಅಲ್ಲ. ದೇಶ ಸ್ವಾತಂತ್ರ್ಯ ಹೋರಾಟದಿಂದ ಸಿಗಲಿಲ್ಲ. ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದಿದ್ದೇವೆ.
– ಕೆ. ರಾಘವೇಂದ್ರ ಹಿಟ್ನಾಳ, ಶಾಸಕ
ಫೊಟೊ
ಕೊಪ್ಪಳ- ಭಾಗ್ಯನಗರ ಬಂದ್ ಹಿನ್ನೆಲೆ ಕೊಪ್ಪಳ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿರುವುದು.
ಕೊಪ್ಪಳ- ಭಾಗ್ಯನಗರ ಬಂದ್ ಹಿನ್ನೆಲೆ ಕೊಪ್ಪಳದ ಗವಿಸಿದ್ದೇಶ್ವರ ಮಠದಿಂದ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು.




