Uncategorized

ಕೊಪ್ಪಳ ವಿಶ್ವವಿದ್ಯಾಲಯದ ನೂತನ‌ ಕುಲಸಚಿವರಿಗೆ ಆತ್ಮೀಯ ಸನ್ಮಾನ

ಕೊಪ್ಪಳ ವಿಶ್ವವಿದ್ಯಾಲಯದ ನೂತನ‌ ಕುಲಸಚಿವರಿಗೆ ಆತ್ಮೀಯ ಸನ್ಮಾನ

ಕೊಪ್ಪಳ, ಜ- 05:
ಕೊಪ್ಪಳ ವಿಶ್ವವಿದ್ಯಾಲಯಕ್ಕೆ ನೂತನ ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ.ಕೆ. ರಮೇಶ ಅವರಿಗೆ ಇಂದು ಆತ್ಮೀಯವಾಗಿ ಸ್ವಾಗತಿಸುವ ಹಾಗೂ ಸನ್ಮಾನ ಸಮಾರಂಭ ಜರುಗಿತು.

ಕೊಪ್ಪಳ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂಧಿಗಳ‌ ವತಿಯಿಂದ ಆಯೋಜಿಸಲಾಗಿದ್ದ ಈ ಸ್ವಾಗತ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ವಹಿಸಿದ್ದರು.
ಈ ವೇಳೆ ಕುಲಸಚಿವರಿಗೆ ಶಾಲು, ಹಾರ ,ಮೈಸೂರ ಪೇಟ ತೊಡಿಸಿ , ಹಣ್ಣು ಹಂಪಲು‌ ನೀಡಿ ಸನ್ಮಾನಿಸಿ, ಶುಭ ಹಾರೈಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ, ನೂತನ ಕುಲಸಚಿವರಾದ ಪ್ರೊ. ರಮೇಶ.ಕೆ ಅವರು , ನೂತನ ಕೊಪ್ಪಳ‌ ವಿಶ್ವವಿದ್ಯಾಲಯದ ಅಭಿವೃದ್ದಿಗೆ ಹಣಕಾಸು, ಜಮೀನು, ಕಟ್ಟಡ ನಿರ್ಮಾಣ, ಸಲಕರಣೆಗಳ ಕೊರತೆ ಸೇರಿದಂತೆ ಸಾಕಷ್ಟು ಸವಾಲುಗಳಿವೆ. ಈ‌ ಭಾಗದ ಸಕಲ‌ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದೊಂದಿಗೆ ನೂತನ‌ ವಿಶ್ವವಿದ್ಯಾಲಯವನ್ನು‌ ಉನ್ನತ ದರ್ಜೆಗೆ ತೆಗೆದುಕೊಂಡು‌ ಹೋಗಲು ಶಕ್ತಿ ಮೀರಿ ಶ್ರಮಿಸುವುದಾಗಿ‌ ತಿಳಿಸಿದರು. ವಿ.ವಿ.ಯ ಬೋಧಕ ಬೋಧಕೇತರ ಸಿಬ್ಬಂಧಿ ಸೇರಿದಂತೆ ಪ್ರತಿಯೊಬ್ಬರೂ ವಿಶ್ವವಿದ್ಯಾಲಯದ ಅಭಿವೃದ್ದಿಗೆ ಕೈ ಜೋಡಿಸಲು‌ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿ.ವಿ.ಯ ಆಡಳಿತಾಧಿಕಾರಿ ಪ್ರೊ. ತಿಮ್ನರೆಡ್ಡಿ‌ ಮೇಟಿಯವರು ಮಾತನಾಡಿ, ಪ್ರೊ‌ರನೇಶ ಅವರು ಮೂಲತಃ ಕಂಪ್ಯೂಟರ್ ಇಂಜನಿಯರ್ ಆಗಿದ್ದು, ಸಾಕಷ್ಟು ಅನುಭವದ ಆಧಾರದಲ್ಲಿ‌ ಕೊಪ್ಪಳ ವಿಶ್ವವಿದ್ಯಾಲಯದ ನೂತನ‌ ಕುಲಸಚಿವರಾಗಿ ಅರ್ಹತೆ ಗಳಿಸಿ‌ ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಕೊಪ್ಪಳ ವಿಶ್ವವಿದ್ಯಾಲಯವನ್ನು ತಾಂತ್ರಿಕವಾಗಿ ಸಹ ಸಾಕಷ್ಡು ಸಮರ್ಥವಾದ ವಿಶ್ವವಿದ್ಯಾಲಯವನ್ನಾಗಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸಿದೆ. ಅವರು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಒಳ್ಳೆಯ ಸೌಭಾಗ್ಯ. ಅವರಿಗೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ‌ ಕೊಪ್ಪಳ ವಿಶ್ವವಿದ್ಯಾಲಯ ಒಳ್ಳೆಯ ಭವಿಷ್ಯವಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ವಿಶ್ವವಿದ್ಯಾಲಯದ ಸಕಲ ಬೋಧಕ ಬೋಧಕೇತರ ಸಿಬ್ಬಂಧಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಈ ವೇಳೆ ಉಪನ್ಯಾಸಕಾರದ ಡಾ. ವೀರೇಶ ಉತ್ತಂಗಿಯವರು ಸ್ವಾಗತಿಸಿ‌ ನಿರೂಪಿಸಿದರೆ, ಡಾ ಬಸವರಾಜ ಎಸ್ ಗಡಾದ ವಂದಿಸಿದರು.

Siddu Hiremath

ಇದು ಒಂದು ಸುದ್ದಿ ಹಾಗೂ ಮನೋರಂಜನೆ ನೀಡುವ ಡಿಜಿಟಲ್ ವಾಹಿನಿ ಆಗಿದೆ

Related Articles

Leave a Reply

Your email address will not be published. Required fields are marked *

Back to top button