ಕುಷ್ಠಗಿ

ಗುರುವಿಗೆ ಔತಣಕೂಟ: ವಿದ್ಯಾರ್ಥಿಗಳಿಂದ ಪ್ರೀತಿಯ ಭೋಜನ

ಗುರುವಿಗೆ ಔತಣಕೂಟ: ವಿದ್ಯಾರ್ಥಿಗಳಿಂದ ಪ್ರೀತಿಯ ಭೋಜನ

ಕುಷ್ಟಗಿ, ಫೆ.18: ನಗರದ ಸ್ಥಳೀಯ ಶ್ರೀ ಬುತ್ತಿ ಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 7ನೇ ತರಗತಿ ವಿದ್ಯಾರ್ಥಿಗಳು “ಗುರುವಿಗೆ ಔತಣಕೂಟ” ಎಂಬ ಶೀರ್ಷಿಕೆಯಡಿ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದರು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ತಾವೇ ವಿವಿಧ ಪಾಕವಿಧಾನಗಳನ್ನು ಸಿದ್ಧಪಡಿಸಿ, ಸಾಂಪ್ರದಾಯಿಕ ಉಡುಗೆಯಲ್ಲಿ ಶಾಲೆಗೆ ಬಂದು ತಮ್ಮ ನೆಚ್ಚಿನ ಶಿಕ್ಷಕರಿಗೆ ಪ್ರೀತಿಯಿಂದ ಉಣಬಡಿಸಿದರು. ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಅರ್ಪಿಸುವ ಮೂಲಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸರ್ವ ಶಿಕ್ಷಕ ವೃಂದ ಪ್ರೀತಿಗೆ ಮನಸೋತು ಭೋಜನ ಸ್ವೀಕರಿಸಿ, ವಿದ್ಯಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ನಾಗರಾಜ ಪಟ್ಟಣ ಶೆಟ್ಟರ್, ಮಾರ್ಗದರ್ಶಕ ಶಿಕ್ಷಕರಾದ ಶ್ರೀ ಸುರೇಶ ಕೊರವರ, ಶ್ರೀ ಗುರುಲಿಂಗಯ್ಯ ಹಿರೇಮಠ, ಶ್ರೀ ಉಮೇಶ್ ಸ್ವಾಮಿ ಹಿರೇಮಠ, ಶ್ರೀ ಸಂಗಮೇಶಿ, ಶ್ರೀ ಶಿವರಾಜ ಪೂಜಾರ, ಶ್ರೀ ರವಿ ಕರಮುಡಿ ಹಾಗೂ ಪ್ರೌಢಶಾಲಾ ಸಿಬ್ಬಂದಿ ವರ್ಗದವರಾದ ಶ್ರೀ ಬಸವರಾಜ ಎಲಿಗಾರ, ಶ್ರೀ ಮುತ್ತಣ್ಣ ಗಡಿಮಿ, ಶ್ರೀಮತಿ ಗೀತಾ ಓತಗೇರಿ, ಶ್ರೀಮತಿ ಭಾಗ್ಯ ಜ್ಯೋತಿ, ಶ್ರೀಮತಿ ಅರುಂಧತಿ ಹಿರೇಮಠ, ಶ್ರೀಮತಿ ಬಸಮ್ಮ ಅರಳಲೇಮಠ, ಶ್ರೀ ವೀರೇಶ ಸಜ್ಜನ್, ಶ್ರೀ ಮಂಜುನಾಥ ಸೇರಿದಂತೆ 7ನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೀತಿ ಮತ್ತು ಗೌರವದಿಂದ ಕೂಡಿದ ಈ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

Leave a Reply

Your email address will not be published. Required fields are marked *

Back to top button