news

ಡಿಸಿ ಆದೇಶದ ಮೇರಗೆ ಅಕ್ರಮ ರೆಸಾರ್ಟ್ ,ಡಾಬಾ ಮತ್ತು  ಹೋಂ ಸ್ಟೇಗಳಿಗೆ    ನೋಟಿಸ್ ನೀಡಿದ  ಗ್ರಾಮ ಪಂಚಾಯತಿ 

ಡಿಸಿ ಆದೇಶದ ಮೇರಗೆ ಅಕ್ರಮ ರೆಸಾರ್ಟ್ ,ಡಾಬಾ ಮತ್ತು  ಹೋಂ ಸ್ಟೇಗಳಿಗೆ   
ನೋಟಿಸ್ ನೀಡಿದ  ಗ್ರಾಮ ಪಂಚಾಯತಿ 

ಮುನಿರಾಬಾದ್ : ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿಯೊಂದು  ಹೊಟೇಲ್ , ರೆಸಾರ್ಟ್ ಗಳಿಗೆ ನೋಟಿಸ್  ನೀಡಲಾಯಿತು.  ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಹೊಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇ  ನಿರ್ಮಾಣ  ಮಾಡಿದ್ದು ಕೊಪ್ಪಳ ಡಿಸಿ ಆದೇಶದ ಮೇರೆಗೆ ಇಂದು ಗ್ರಾಮ ಪಂಚಾಯತಿ ವತಿಯಿಂದ ಅವುಗಳಿಗೆ ನೊಟೀಸ್ ನೀಡಲಾಯಿತು. ಅನಧಿಕೃತವಾಗಿ ನಿರ್ಮಾಣವಾಗಿರುವ ರೆಸಾರ್ಟ್ , ಡಾಬಾಗಳ  ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು  ಬಾಡಿಗೆ ಇರುವ ಹೋಟೆಲ್ ಮಾಲೀಕರಿಗೆ ದಿಕ್ಕುತೋಚದಂತಾಗಿದೆ.  ಆದರೆ ಕೃಷಿ ಜಮೀನಿನಲ್ಲಿ ಹೊಟೇಲ್ ನಿರ್ಮಾಣ‌  ಮಾಡಬಾರದು ಎಂಬ ಆದೇಶ ಇದ್ದರೂ ಸಹ ಇಲ್ಲಿನ ಬಂಡವಾಳ ಶಾಹಿಗಳು ನಿಯಮಗಳನ್ನು ಗಾಳಿಗೆ ತೂರಿ  ಶಿಷ್ಟಾಚಾರವನ್ನು  ಉಲ್ಲಂಘನೆ ಮಾಡಿದ್ದಾರೆ.   ಮೂರು ದಿನದಲ್ಲಿ ತೆರವು ಮಾಡಬೇಕು ಇಲ್ಲವಾದಲ್ಲಿ   ಪಂಚಾಯತಿ ವತಿಯಿಂದ  ತೆರವುಗೊಳಿಸ್ತೀವಿ ಎಂದ  ಆದೇಶಿಸಲಾಗಿದೆ  ಮತ್ತು ಸಣ್ಣಪುಟ್ಟ ರಸ್ತೆ ಬದಿಗಿದ್ದ ಹೊಟೆಲ್ ಗಳಿಗೂ ನೋಟೀಸ್ ಜಾರಿ ಮಾಡಿದ್ದು ಬಡವರ ಮೇಲೆ ಯಾಕಿಷ್ಟು ಸಿಟ್ಟು ಎಂದು ಆಕ್ರೋಶ ಹೊರಹಾಕಿದರು.

ಬಾಕ್ಸ್ 1
ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ನವರು   ಸೇರಿಕೊಂಡು ನೋಟಿಸ್ ನೀಡಿದ್ದೇವೆ  .ಗ್ರೀನ್ ಲ್ಯಾಂಡ್ ರೆಸಾರ್ಟ್   ಭೂಮಿ  ಒತ್ತುವರಿ ಮಾಡಿಕೊಂಡಿದ್ದು ಅವರಿಗೆ ಸಹ ನೋಟಿಸ್ ಕೊಡಲಾಗಿದೆ  ಹಾಗೂ ರೆಸಿಡೆನ್ಸಿ ಏರಿಯಾದಲ್ಲಿ ಹೋಂ ಸ್ಟೇ   ಮಾಡೋಕೆ ಬರುವುದಿಲ್ಲ ನಾವು ಈಗಾಗಲೇ ಮೂರು ರೇಸಾಲ್ಟ್ ,ನಾಲ್ಕು ಡಾಬಾಗಳಿಗೂ ಸಹ ನೋಟಿಸ್ ಕೊಟ್ಟಿದ್ದೇವೆ ಫೆ. 17.ರಂದು ಜಿಲ್ಲಾಧಿಕಾರಿಗಳು ಇದರ ಬಗ್ಗೆ ವರದಿ ಕೇಳಿದ್ದಾರೆ ಎಂದು ಹೇಳಿದರು
 (ಮಂಜುಳಾ ಅಭಿವೃದ್ಧಿ ಅಧಿಕಾರಿಗಳು    ಗ್ರಾಮ ಪಂಚಾಯತಿ ಶಿವಪುರ್ )

ಬಾಕ್ಸ್ 2
ಜಾಗದ ಮಾಲೀಕನಿಗೆ( ಲೆಥಿಪ್ ಸಾಬ )  ಒಂದು ತಿಂಗಳಿಗೆ 10 ಸಾವಿರ ಕಟ್ಬಬೇಕು ನಾವು ದಿಡೀರನೆ ಮೂರ್ನಾಕು  ದಿನದಲ್ಲೇ  ಜಾಗ ಖಾಲಿ ಮಾಡು ಅಂದರೆ  ನಾವು ಹೇಗೆ ಮಾಡೋದು ಸುಮಾರು 3-4 ವರ್ಷದಿಂದ ನಾವು ಇದೇ ಜಾಗದಲ್ಲಿ ಹೋಟೆಲ್ ಮಾಡಿಕೊಂಡು ಬಂದಿದ್ದೀವಿ ನಾವು ನಮ್ಮ ಹೋಟೆಲ್ ನಲ್ಲಿ ಧೂಮಪಾನದ ಯಾವುದೇ ತರದ ವಸ್ತುಗಳನ್ನು ಮಾರೋದಿಲ್ಲ  ಆದ್ರೂ ಸಹ ನಮ್ಮಂತ ಬಡ ಹೋಟೆಲ್ ಮೇಲೆ ಅಧಿಕಾರಗಳ ಕಣ್ಣು ಎಂದು ಅಳಲು ತೋಡಿಕೊಂಡರು ( ಬಾಬಣ್ಣ ಹೋಟೆಲ್ ಮಾಲೀಕ )

Related Articles

Leave a Reply

Your email address will not be published. Required fields are marked *

Back to top button