Breking news

ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಕರ್ನಾಟಕ ಅಚೀವರ್ಸ್ ಅವಾರ್ಡ್ – 2026

ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಕರ್ನಾಟಕ ಅಚೀವರ್ಸ್ ಅವಾರ್ಡ್ – 2026

ಕೊಪ್ಪಳ: ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ವಿವಿಧ ಸಾಮಾಜಿಕ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಗಮನಿಸಿ, ಹಿರಿಯ ಚಲನಚಿತ್ರ ನಟಿ ಶ್ರೀಮತಿ ತಾರಾ ಅನುರಾಧ ಅವರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಯ್ಯ ಸ್ವಾಮಿ ನವಲಿ ಅವರಿಗೆ Karnataka Achievers Award – 2026 ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಈ ಪ್ರಶಸ್ತಿ ಸಂಸ್ಥೆ ಗ್ರಾಮೀಣ ಅಭಿವೃದ್ಧಿ, ಸಮಾಜಮುಖಿ ಕಾರ್ಯಗಳು ಮತ್ತು ಜನಸೇವೆಯ ಮೂಲಕ ಮಾಡಿದ ಸಾಧನೆಗೆ ಮಾನ್ಯತೆ ನೀಡಿದಂತಾಗಿದೆ.ಶ್ರೀ ಶಿವಯ್ಯ ಸ್ವಾಮಿ ನವಲಿ ಅವರಿಗೆ ಈ ಗೌರವ ದೊರೆತಿರುವ ಹಿನ್ನೆಲೆಯಲ್ಲಿ ಸಮಾಜದ ಹಲವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ವಿ.ಎಂ. ಭೂಸನೂರಮಠ (ಕೊಪ್ಪಳ), ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಸ್ಥೆಯ ಎಲ್ಲಾ ಸಂಚಾಲಕರು, ಹಾಗೂ ಸ್ವಾಮಿ ವಿವೇಕಾನಂದ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button