ಕೊಪ್ಪಳ ಸುದ್ದಿ

ಪರಿಸರ ಮಾಲಿನ್ಯ ಖಂಡಿಸಿ ಇಂದು ಕೊಪ್ಪಳ ಬಂದ್‌: ಯಸಸ್ವಿ

ಕೊಪ್ಪಳ :ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾವೇದಿಕೆ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಬಂದ್‌ ಕರೆ ನೀಡಿದ್ದು ಅಂಗಡಿಗಳು ಮುಚ್ಚಿದ್ದವು.

ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಬೆಳಿಗ್ಗೆ ಬಸ್‌ ನಿಲ್ದಾಣದ ಸಮೀಪದಲ್ಲಿ ಬೇಕರಿ ಹಾಗೂ ಕೆಲ ಕಿರಾಣಿ ಅಂಗಡಿಗಳನ್ನು ತೆಗೆಯಲಾಗಿತ್ತು. ಬೈಕ್‌ ಮೂಲಕ ಬಂದ  ಹೋರಾಟಗಾರರು ಬಲವಂತವಾಗಿ ಬಂದ್‌ ಮಾಡಿಸಿದರು. ಜವಾಹರ ರಸ್ತೆಯಲ್ಲಿಯೂ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಲಾಯಿತು.

24 ಫೆಬ್ರವರಿ 2026 ಕೊಪ್ಪಳ ಭಾಗ್ಯನಗರ ಬಂದ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಗಣ್ಯರು

ಅಧ್ಯಕ್ಷತೆ: ಅಲ್ಲಮಪ್ರಭು ಬೆಟ್ಟದೂರು, ಪ್ರಧಾನ ಸಂಚಾಲಕರು, ಜಂಟಿ ಕ್ರಿಯಾ ವೇದಿಕೆ
ಪ್ರಾಸ್ತಾವಿಕ ನುಡಿ: ಮಲ್ಲಿಕಾರ್ಜುನ ಬಿ. ಗೋನಾಳ, ಸಂಚಾಲಕರು, ಜಂಟಿ ಕ್ರಿಯಾ ವೇದಿಕೆ ಸಾನಿಧ್ಯ: ಪಂಡಿತಾರಾಧ್ಯ ಶ್ರೀ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ ,ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮಿಗಳುಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಜೇವರ್ಗಿರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳರಾಜಶೇಖರ ಹಿಟ್ನಾಳ, ಸಂಸದರು, ಕೊಪ್ಪಳ ಸಂಗಣ್ಣ ಕರಡಿ, ಮಾಜಿ ಸಂಸದರು ಕೊಪ್ಪಳ ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯರು, ಕೊಪ್ಪಳ
ಎ.ಟಿ. ರಾಮಸ್ವಾಮಿ, ಮಾಜಿ ಶಾಸಕರು, ಅಧ್ಯಕ್ಷರು, ಪರಿಸರಕ್ಕಾಗಿ ನಾವು, ಬೆಂಗಳೂರು
ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಚಾಮರಸ ಮಾಲಿಪಾಟೀಲ್, ಗೌರವಾಧ್ಯಕ್ಷರು, ಕೈ.ರಾ.ರೈ.ಸಂಘ
ವಿ.ಎನ್. ರಾಜಶೇಖರ, ರಾಷ್ಟ್ರೀಯ ಉಪಾಧ್ಯಕ್ಷರು, ಶಿಕ್ಷಣ ಉಳಿಸಿ ಸಮಿತಿ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಮಂತ್ರಿಗಳು, ಕುಷ್ಟಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು
ಪ್ರಸನ್ನ ಗಡಾದ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ ರಮೇಶ್ ಹ್ಯಾಟಿ, ಅಧ್ಯಕ್ಷರು, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಮ್ಜದ್ ಪಟೇಲ್, ಮಾಜಿ ಅಧ್ಯಕ್ಷರು ನಗರಸಭೆ ,ಸಿ.ವಿ. ಚಂದ್ರಶೇಖರ, ರಾಜಕೀಯ ಧುರೀಣರು, ಕೊಪ್ಪಳ,ಡಿ.ಎಚ್. ಪೂಜಾರ, ಕೃಷಿ ಬೆಲೆ ಆಯೋಗದ ಸದಸ್ಯರು, ಕೊಪ್ಪಳ ವೀರಣ್ಣ ಬುಳ್ಳಾ, ಅಧ್ಯಕ್ಷರು, ಗಂಜ್ ವರ್ತಕರ ಸಂಘ, ಕೊಪ್ಪಳಎ.ವಿ‌. ಕಣವಿ ವಕೀಲರು, ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ, ಕೊಪ್ಪಳ,ವಿ.ಎಂ.ಭೂಸನೂರು ಮಠ ಹಿರಿಯ ನ್ಯಾಯವಾದಿಗಳ, ಕೊಪ್ಪಳ,ಬಾವರಾಜ ಬಳ್ಳೊಳ್ಳಿ ಲಯನ್ಸ್‌ ಕ್ಲಬ್ ಕೊಪ್ಪಳ,ಪೀರಾ ಹುಸೇನ್ ಹೊಸಳ್ಳಿ ಹಿರಿಯ ವಕೀಲರು,ದಾನಪ್ಪ ಕವಲೂರು, ಮಾಜಿ ತಾ.ಪಂ. ಸದಸ್ಯರು, ಭಾಗ್ಯನಗರ,ಚಂದ್ರಶೇಖರ್ ಕವಲೂರು, ರಾಜಕೀಯ ಧುರೀಣರು, ಕೊಪ್ಪಳ,ಶ್ರೀಮತಿ ಜ್ಯೋತಿ ಗೊಂಡಬಾಳ, ಮಹಿಳಾ ದುರೀಣೆ, ಕೊಪ್ಪಳ
ಶ್ರೀಮತಿ ಕಾವ್ಯಾ ಗಡಾದ, ಮಹಿಳಾ ಮುಖಂಡರು ಕೊಪ್ಪಳ,
ಶ್ರೀಮತಿ ಸರೋಜಾ ಬಾಕಳೆ, ಮಹಿಳಾ ಮುಖಂಡರು ಭಾಗ್ಯನಗರ,ಶ್ರೀಮತಿ ಮಾಲಾ ಬಡಿಗೇರ, ಪುಸ್ತಕ ಪ್ರಕಾಶಕರು, ಕೊಪ್ಪಳ,ಶ್ರೀಮತಿ ಸಾವಿತ್ರಿ ಮುಜುಮದಾರ್, ಮಹಿಳಾ ಮುಖಂಡರು, ಕೊಪ್ಪಳ,ಶ್ರೀಮತಿ ವಿದ್ಯಾ ನಾಲ್ವಾಡ, ಮಹಿಳಾ ಸಂಘಟಕರು ಕೊಪ್ಪಳ
ಎಂ.ಕೆ. ಸಾಹೇಬ್, ಯುವ ಮುಖಂಡರು
ಕಾರ್ಯಕ್ರಮ ನಿರ್ವಹಣೆ ಮಂಜುನಾಥ ಜಿ. ಗೊಂಡಬಾಳ ಮತ್ತು ರಮೇಶ ತುಪ್ಪದ,ಅಧ್ಯಕ್ಷೀಯ ಭಾಷಣ: ನಿರ್ಣಯ ಮಂಡನೆ ಅಲ್ಲಮಪ್ರಭು ಬೆಟ್ಟದೂರು
ವಂದನಾರ್ಪಣೆ: ಕಾಶಪ್ಪ ಚಲವಾದಿ
ಪರಿಸರ ಗಾಯನ ಸದಾಶಿವ ಪಾಟೀಲ್ ಹಿರಿಯ ಕಲಾವಿದರು.

ನಿರ್ಣಯಗಳು:
1.ಬಲ್ಡೋಟ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ಮುಂದುವರಿದ ಭಾಗವಾಗಿ ರಸ್ತೆ ತಡೆ, ರೈಲು ತಡೆ ಮುಂತಾದ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು.
2. ಶಾಸಕರು ಜಿಲ್ಲಾ ಮಂತ್ರಿಗಳ ನೆತೃತ್ವದಲ್ಲಿ ಶೀಘ್ರದಲ್ಲಿ ಸರ್ವಪಕ್ಷಗಳ ಮತ್ತು ಆಂದೋಲನದ ಮುಖಂಡರ ನಿಯೋಗ ಕೊಂಡೊಯ್ದು ಲಕ್ಷಾಂತರ ಜನರ ಭವಿಷ್ಯದ ಆರೋಗ್ಯ ಹಾನಿ ಕುರಿತು ಮನವರಿಕೆ ಮಾಡಿಕೊಡುವುದು.
3. ಉಚ್ಚನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಲ್ಡೋಟ ಬಸಾಪುರ ಕೆರೆ ಅತಿಕ್ರಮಣ ತೆರವು ಮಾಡಿ ಸಾರ್ವಜನಿಕರಿಗೆ ಬಳಕೆಗೆ ಮುಕ್ತಗೊಳಿಸಬೇಕು.
4. ಐ.ಐ.ಎಸ್. ಸಿ ಮತ್ತು ಎಐಐಎಂಎಸ್ ಪರಿಸರ, ಆರೋಗ್ಯ ಸಮೀಕ್ಷೆ ನಡೆಸಬೇಕು.
5. ಪರಿಸರ ತಜ್ಞರ ವರದಿಯಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು.
6. ಮುಖ್ಯಮಂತ್ರಿಗಳು, ಕೈಗಾರಿಕಾ ಮಂತ್ರಿ ಬಾಧಿತ ಹಳ್ಳಿಗೆ ಭೇಟಿ ಕೊಡಬಕು.
7. ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆ ಗಳನ್ನು ಸೀಜ್ ಮಾಡಬೇಕು.
8. ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡುವುದು.
9. ಬಾಧಿತ ಹಳ್ಳಿಗಳಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು.
10. ಸರ್ಕಾರ ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು

 

Related Articles

Leave a Reply

Your email address will not be published. Required fields are marked *

Back to top button