Breking news

ಬಲ್ಡೋಟ ಕಾರ್ಖಾನೆ ವಿರೋಧಿ ಹೋರಾಟದ ಸಿದ್ಧತಾ ಸಭೆ ಯಶಸ್ವಿ;

ಅಧಿವೇಶನದ ಮುಂದೆ ಬೆಂಗಳೂರು ಚಲೋಗೆ ನಿರ್ಧಾರ

ಬಲ್ಡೋಟ ಕಾರ್ಖಾನೆ ವಿರೋಧಿ ಹೋರಾಟದ ಸಿದ್ಧತಾ ಸಭೆ ಯಶಸ್ವಿ;

  • ಅಧಿವೇಶನದ ಮುಂದೆ ಬೆಂಗಳೂರು ಚಲೋಗೆ ನಿರ್ಧಾರ

ಕೊಪ್ಪಳ: ನಗರಸಭೆ ಮುಂದೆ 128ನೇ ದಿನದಿಂದ ಮುಂದುವರಿದ ಬಲ್ಡೋಟ ಹಟಾವೋ ಅನಿರ್ದಿಷ್ಟವಾದಿ ಪ್ರತಿಭಟನೆ ಜೊತೆಗೆ ಮುಂದಿನ ಹೋರಾಟಸ ಕುರಿತು ಬೃಹತ್ ಪೂರ್ವಸಿದ್ಧತಾ ಸಭೆ ಯಶಸ್ವಿಯಾಯಿತು.

ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಆರೋಗ್ಯ ಜೀವ ಉಳಿಸಿ ಹೋರಾಟಕ್ಕೆ ಹೊಸ ತಿರುವು ನೀಡಲು ಸಭೆ ನಿರ್ಧಾರ ಮಾಡಿತು.

ಈಚೆಗೆ ನಡೆದ ಬಂದ್ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಣಯಗಳನ್ನು ಅಂಗೀಕರಿಸಿ, ಬಂದ್ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಜನರ ಜೀವ, ಆರೋಗ್ಯ ಉಳಿಸಿ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಕೇಂದ್ರ ಪರಿಸರ ಇಲಾಖೆ ತಂತ್ರಜ್ಞರ ವರದಿ ಶಿಫಾರಸು ಮಾಡಿದಂತೆ ಹಿರೇಬಗನಾಳ, ಅಲ್ಲಾನಗರ ಹತ್ತಿರದ ಮಾಲಿನ್ಯ ಮಾಡುವ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು, ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಬೇಕು, ಬಸಾಪುರ ಕೆರೆ ಬಲ್ಡೋಟ ಅತಿಕ್ರಮಣದಿಂದ ತೆರವುಗೊಳಿಸಬೇಕು, ಮುಖ್ಯಮಂತ್ರಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ಮಾಡಲು ಆಗ್ರಹಿಸಿ ನಡೆದ ಹೋರಾಟ ಮುಂದುವರೆಸಿ ಬೆಂಗಳೂರು ಚಲೋ ನಡೆಸಲು ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಿಸಲಾಯಿತು. ಮಾರ್ಚ್ 13, 17ರಂದು ಬೆಂಗಳೂರು ಚಲೋ ನಡೆಸಲಾಗುವುದು ಎನ್ನುವ ನಿರ್ಣಯವನ್ನು ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಂಡಿಸಿದರು. ಬೆಂಗಳೂರು

ನಿವಾಸಿ ಕೊಪ್ಪಳ ಜನರು, ಬಾಧಿತ ಹಳ್ಳಿಯ ರೈತರು, ಮಹಿಳೆಯರು, ಯುವಜನರು, ನಗರದ ಪ್ರಜ್ಞಾವಂತರು ಸ್ವಯಂ ಪ್ರೇರಿತವಾಗಿ ಬೆಂಗಳೂರು ಚಲೋ ಹೋರಾಟಕ್ಕೆ ಹೊರಟು ಬರಬೇಕೆಂದು ಕರೆ ನೀಡಿದರು. ಸರ್ಕಾರ ಬಜೆಟ್ ಅಧಿವೇಶನ ನಡೆಸುವ ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಎರಡು ಲಕ್ಷ ಜನರು ಕಾರ್ಖಾನೆ ಬಾಧಿತರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಸರ್ವಪಕ್ಷದ ಮುಖಂಡರ ನಿಯೋಗ ಭೇಟಿ ಮಾಡಲು ಅವಕಾಶ ಮಾಡಿ ಕೊಡುತ್ತಿಲ್ಲ. ಕೊಪ್ಪಳ ಜನರ ಕಡೆಗಣನೆ ಸರ್ಕಾರಕ್ಕೆ ಶ್ರೇಯಸ್ಸು ತರುವುದಿಲ್ಲ. ಬೆಂಗಳೂರು ಚಲೋ ಮುಂದಿನ ಹೋರಾಟದ ದಿಕ್ಸೂಚಿಯಾಗಲಿದೆ ಎಂದರು. ಈ ನಿರ್ಣಯದ ಅನುಮೋದನೆಯನ್ನು ಎಪಿಎಂಸಿ ವರ್ತಕರಾದ ಪ್ರಭು ಹೆಬ್ಬಾಳ ಅವರು ಅನುಮೋದಿಸಿ, ಕೊಪ್ಪಳ ಉಳಿಯಲು, ಬಾಧಿತ ಹಳ್ಳಿಯ ರೈತರು, ಕೃಷಿ, ಉಳಿಸಿಕೊಳ್ಳಲು ಇನ್ನೂ ಸುದೀರ್ಘ ಹೋರಾಟ ಮಾಡಲು ಮುಂದಾಗೋಣ ಎಂದರು. ಸಂಚಾಲಕ ಮಲ್ಲಿಕಾರ್ಜುನ ಬಿ‌. ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರ್ವಹಿಸಿ, ಒಟ್ಟು ಹೋರಾಟದ ರೂಪರೇಷೆ ವಿವರಿಸಿದರು.

ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ, ಮಲ್ಲನಗೌಡ ಕೋನನಗೌಡ್ರ, ಪತ್ರಕರ್ತ ಸೋಮರಡ್ಡಿ ಅಳವಂಡಿ, ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷರಾದ ಡಿ.ಎಚ್. ಪೂಜಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕವಲೂರು, ಪತ್ರಕರ್ತ ಸಂತೋಷ ದೇಶಪಾಂಡೆ, ಹಿರಿಯ ವಕೀಲರಾದ ಪೀರಾ ಹುಸೇನ್ ಹೊಸಳ್ಳಿ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ಸರೋಜಾ ಬಾಕಳೆ, ಕೀರ್ತಿ ಎಸ್. ಪಾಟೀಲ್, ಮಂಜುನಾಥ ಸೊರಟೂರು, ಹನುಮಂತಪ್ಪ ಗೊಂದಿ, ಡಾ. ಮಂಜುನಾಥ ಸಜ್ಜನ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ, ಶರಣು ಗಡ್ಡಿ, ಶಿವಾನಂದಯ್ಯ ಬೀಳಗಿಮಠ, ಬಾಧಿತ ರೈತ ಮಾರ್ಕಂಡಯ್ಯ ಹಿರೇಮಠ, ರಮೇಶ ತುಪ್ಪದ, ಕಾಶಪ್ಪ ಛಲವಾದಿ, ರಘು ಚಾಕ್ರಿ, ಸುಖಮುನಿಯಪ್ಪ ಬಡಿಗೇರ, ಬಸವರಾಜ ಕೊಪ್ಪದ, ಕುಣಿಕೇರಿ ಬಾಧಿತ ರೈತ ಹುಲುಗಪ್ಪ ಭೋವಿ, ಗವಿಸಿದ್ದಪ್ಪ ಹಲಿಗಿ, ಅಂದಪ್ಪ ಹುರಳಿ, ನಟರಾಜ ಸವಡಿ, ಶಿವಯ್ಯ ಹಿರೇಮಠ, ಶರಣು ಶೆಟ್ಟರ್ ಚರ್ಚಿಸಿ ಸಭೆಗೆ ಸಲಹೆ ನೀಡಿದರು.

ಸಭೆಯಲ್ಲಿ ಪುರ ಪ್ರಮುಖರಾದ ಉದ್ಯಮಿ ಬಸವರಾಜ ಬಳ್ಳೊಳ್ಳಿ, ಮಲ್ಲಣ್ಣ ಬಳ್ಳೊಳ್ಳಿ, ಭಾಗ್ಯನಗರ ಪ.ಪಂ. ಅಧ್ಯಕ್ಷ ರಮೇಶ ಹ್ಯಾಟಿ, ಮಾಜಿ ತಾ.ಪಂ. ಅಧ್ಯಕ್ಷ ದಾನಪ್ಪ ಕವಲೂರ, ವಿಪಿನ್ ಕುಮಾರ ತಾಲೇಡಾ, ಗ್ಯಾನೇಶ ಹ್ಯಾಟಿ, ರಾಜು ಬಾಕಳೆ ವಕೀಲರು, ಸುಜಾತಾ ಹಲಗೇರಿ, ಗುರುರಾಜ ಹಲಗೇರಿ, ಮಂಜುನಾಥ ಅಂಗಡಿ, ಶಿವಕುಮಾರ ಕುಕನೂರು, ಶರಣು ಡೊಳ್ಳಿನ, ಶಿವಕುಮಾರ ಪತ್ತಾರ, ದೊಡ್ಡೇಶ ಯಲಿಗಾರ, ಈರಯ್ಯ ಓ. ಹಿರೇಮಠ, ಸಾವಿತ್ರಿ ಮುಜುಮದಾರ್, ಹನುಮೇಶ ಕಲ್ಮಂಗಿ, ವಿಶ್ವನಾಥ ಮಹಾಂತಯ್ಮನ ಮಠ, ಈಶ್ವರಪ್ಪ ಕೊರ್ಲಹಳ್ಳಿ, ರಾಜೇಶ್ ಸಸಿಮಠ, ಸೋಮನಗೌಡ ಹೊಗರನಾಳ, ಸುಕ್ರುಸಾಬ್ ನದಾಫ್, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಬಿ.ಜಿ. ಕರಿಗಾರ, ಎಸ್.ಎಂ. ಕಂಬಾಳಿಮಠ, ರಾಜಶೇಖರ ಏಳುಬಾವಿ, ಶಿವಲಿಂಗಪ್ಪ ವಣಗೇರಿ, ವಿಜಯಕುಮಾರ ಬೋಂದಾಡೆ, ಯಲ್ಲಪ್ಪ ಬಂಡಿ, ಎಚ್.ಎಸ್. ಬಾರಕೇರ, ರವಿಕುಮಾರ ದೊಡ್ಡಮನಿ, ಹುಸೇನ್ ಭಾಷಾ ಅಗ್ನಿ ದಿವ್ಯಾ, ಪ್ರಕಾಶ ಮೇದಾರ, ಗಂಗಾಧರ ಖಾನಾಪೂರ, ಸುರೇಶಗೌಡ ಹಿರೇಗೌಡರ, ಅಶೋಕ ಕುಂಬಾರ, ಚಂದ್ರಶೇಖರ ಮಂಗಳೂರು, ಮಂಜುನಾಥ ಬೋರಳ್ಳಿ, ನಾಗರಾಜ ಶೆಟ್ಟರ್, ಶಿವರಾಜ ಹೊಸಮಠ, ಡಾ. ಬಸವರಾಜ ಪೂಜಾರ, ಸುಭಾನ್ ಸಾಬ್ ನೀರಲಗಿ, ಈಶಪ್ಪ ಹುಬ್ಳಿ, ಬಸವರಾಜ ಕೊಪ್ಪಳ, ಚಿಟ್ಟಿಬಾಬು ಸಿಂಧನೂರು, ಶಂಭುಲಿಂಗಪ್ಪ ಹರಗೇರಿ, ಗಿರೀಶ್ ಪಾನಘಂಟಿ, ಬಸವರಾಜ ಲಿಂಗೋಜಿ, ಸುರೇಶ ಪೂಜಾರ, ಸಂಗಪ್ಪ ವಾರದ, ಸಿ.ಬಿ.ಪಾಟೀಲ್, ರವಿ ಕಾಂತನವರ, ಸಂಜೀವ ಗೌಡ ಪೋ.ಪಾಟೀಲ್, ಬಸವರಾಜ ಹೂಗಾರ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button