ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ…

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ…
ವಿಜಯನಗರ: ಹೊಸಪೇಟೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ದೇವದಾಸ್ ಮತ್ತು ಅವರ ಕಚೇರಿಯ ಅಕೌಂಟೆಂಟ್ ಮಾರುತಿ ಅವರು ಮಂಗಳವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಗುತ್ತಿಗೆದಾರರೊಬ್ಬರಿಂದ ₹೧ ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೂವಿನಹಡಗಲಿಯ ಗುತ್ತಿಗೆದಾರ ಮಹೇಶ್ ಹಲಗೇರಿ ಅವರು ಲೋಕೋಪಯೋಗಿ ಇಲಾಖೆಯ ಟೆಂಡರ್ ಮೂಲಕ ಕಾಮಗಾರಿ ಪಡೆದುಕೊಂಡು ಕಾಮಗಾರಿ ಮುಗಿಸಿದ್ದರು. ಬಿಲ್ ಮಂಜೂರಾತಿಗಾಗಿ ದೇವದಾಸ್ ಮತ್ತು ಮಾರುತಿ ಅವರು ಶೇ ೧೦ರಷ್ಟು ಕಮಿಷನ್ ರೂಪದಲ್ಲಿ ₹೧ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಯುಕ್ತಕ್ಕೆ ದೂರು ನೀಡಲಾಗಿತ್ತು. ಅದರಂತೆ ಗುತ್ತಿಗೆದಾರರು ಲಂಚ ನೀಡುತ್ತಿದ್ದಾಗ ಈ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದರು.
ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಲೋಕಾಯುಕ್ತ ಡಿವೈಎಸ್‌ಪಿ ಸಚಿನ್ ಎಸ್.ಚಲವಾದಿ, ಇನ್‌ಸ್ಪೆಕ್ಟರ್‌ಗಳಾದ ರಾಜೇಶ್ ಎಸ್.ಲಮಾಣಿ, ಅಮರೇಶ್ ಹುಬ್ಬಿ, ಸಿಬ್ಬಂದಿ ಸುರೇಶ, ರೇಣುಕಪ್ಪ, ಕುಮಾರ ನಾಯ್ಕ, ಚನ್ನಬಸಪ್ಪ, ಕೃಷ್ಣ ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




