news

ಶಿವರಾತ್ರಿ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳು : ಯೋಗಿನಿ ಅಕ್ಕನವರು.

ಶಿವರಾತ್ರಿ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳು : ಯೋಗಿನಿ ಅಕ್ಕನವರು.

ಕೊಪ್ಪಳ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಮಹೋತ್ಸವದ ಕಾರ್ಯಕ್ರಮಗಳು ನಾಳೆ ದಿ.14 ರಿಂದ ಪ್ರಾರಂಭಗೊಳ್ಳುತ್ತವೆ. ಅಂದು ಸಂಜೆ 04 ಗಂಟೆಗೆ ಶಿವಧ್ವಜಾರೋಹಣ, 12 ಜ್ಯೋತಿರ್ಲಿಂಗಗಳನ್ನು ಹೊತ್ತ “ಶಿವ ಸಂದೇಶ” ರಥ ಯಾತ್ರೆಯ ಭವ್ಯ ಮೆರವಣಿಗೆ ಕೊಪ್ಪಳದ ಮುಖ್ಯ ಬೀದಿಗಳಲ್ಲಿ ಸಾಗಿ ಬರಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮಹಾಶಿವರಾತ್ರಿ ಪ್ರಯುಕ್ತ ದಿನಾಂಕ: 15 ರಿಂದ 20 ರವರೆಗೆ ಪ್ರತಿ ದಿನ ಸಂಜೆ 05 ರಿಂದ ರಾತ್ರಿ 10 ಗಂಟೆಯವರೆಗೆ ದೇವರಾಜ್ ಅರಸ್ ಕಾಲೋನಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಕರ್ಷಣೆಗಳು ಆವರಣದಲ್ಲಿನ ವೈವಿದ್ಯಮಯ ಕಾರ್ಯಕ್ರಮಗಳು ಜರುಗುವವು.
40 ಅಡಿ ಎತ್ತರದ ಗೋಪುರ,ರಾಮೇಶ್ವರ ಜ್ಯೋತಿರ್ಲಿಂಗ ದರ್ಶನ,ಶಿವ ಮತ್ತು ಶಂಕರ ಚೈತನ್ಯ ದೃಶ್ಯ ಮಂಟಪ,ಪ್ರೊಜೆಕ್ಟರ್ ಶೋ ಮೂಲಕ ಶಿವರಾತ್ರಿ ರಹಸ್ಯಅಧ್ಯಾತ್ಮ ಚಿತ್ರ ಪ್ರದರ್ಶನದಿಂದ ಮೌಲ್ಯ ಜಾಗೃತಿ ವೈವಿಧ್ಯಮಯ ಶಿವಲಿಂಗಗಳ ದರ್ಶನ ವಜ್ರಲಿಂಗ, ಸ್ವರ್ಣಲಿಂಗ, ಮುತ್ತುರತ್ನಗಳ ಲಿಂಗ, ಬೆಳಕಿನ ಲಿಂಗ, ಸಹಸ್ರಲಿಂಗ, ರುದ್ರಾಕ್ಷಿ ಲಿಂಗ,ಶಿವನೊಂದಿಗೆ ಸೆಲ್ಫಿ.
ದಿ.15. ಉದ್ಘಾಟನಾ ಮಹೋತ್ಸವದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಸಂಗಣ್ಣ ಕರಡಿ, ಮಾಜಿ ಸಂಸದರು. ಪ್ರಸನ್ನ ಗಡಾದ್ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು. ಸಿದ್ದರಾಮೇಶ್ವರ ಅಪರ ಜಿಲ್ಲಾಧಿಕಾರಿಗಳು, ಭಾಗವಹಿಸುವರು,ದಿ16. ರಂದು ಭಾವೈಕ್ಯತಾ ಮಹೋತ್ಸವ ಕಾರ್ಯಕ್ರಮವನ್ನು ಸಂಸದ ರಾಜಶೇಖರ ಹಿಟ್ನಾಳ್ ಉದ್ಘಾಟಿಸುವರು,
ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಉಪಸ್ಥಿತಿಯಲ್ಲಿರುವರು. ಅಧ್ಯಕ್ಷತೆಯನ್ನು ಸಿ.ವಿ. ಚಂದ್ರಶೇಖರ ವಹಿಸುವರು, ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಗುಪ್ತಾ, ಶರಣಪ್ಪ ಚವ್ಹಾಣ ಆಯುಕ್ತರು ನಗರಾಭಿವೃದ್ದಿ ಪ್ರಾಧಿಕಾರ ಉಪಸ್ಥಿತರಿರುವರು. ಜಿಲ್ಲಾ ಪತ್ರಿಕಾ ಮಾಧ್ಯಮದವರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ,ದಿ. 17 ರಂದು ಶಿವಶಕ್ತಿಯರ ಚೈತನ್ಯ ಸಾಕ್ಷಾತ್ಕಾರ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯವರಿಗೆ ಗೌರವಾರ್ಪಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜಯಪ್ರಕಾಶ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ, ಸುರೇಶ ಬಬಲಾದ್ ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಭಾಗ್ಯನಗರ, ರಮೇಶ ಹ್ಯಾಟಿ ಅಧ್ಯಕ್ಷರು ಪಟ್ಟಣ ಪಂಚಾಯತ್ ಭಾಗ್ಯನಗರ, ಅಮರೇಶ ಪೂಜಾರ ಜಿಲ್ಲಾ ಕಾರಾಗೃಹ ಅಧೀಕ್ಷಕರು ಮುಂತಾದವರು ಭಾಗವಹಿಸುವರು,ದಿ.18 ರಂದು ಸಾಂಸ್ಕೃತಿಕ ಮಹೋತ್ಸವ ವಿವಿಧ ಶಾಲಾ ಮಕ್ಕಳಿಂದ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಚಾಲಕರಿಗೆ ಈಶ್ವರೀಯ ಸನ್ಮಾನ ಕಾರ್ಯಕ್ರಮ,ದಿ.19 ಆಧ್ಯಾತ್ಮ ಮಹೋತ್ಸವ ದಿನದಂದು ಆಶಾ ಕಾರ್ಯಕರ್ತೆಯರಿಗೆ ಈಶ್ವರೀಯ ಸನ್ಮಾನ ಕಾರ್ಯಕ್ರಮ,ದಿ:20. ರಂದು ಮೌಲ್ಯ ಜಾಗೃತಿ ಮಹೋತ್ಸವ
ಸಾರ್ವಜನಿಕರು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬೇಕೆಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಸ್ನೇಹಕ್ಕ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button