ಸಿ ಎಂ.ಮಾನಸ ಪುತ್ರನಿಗೆ ಸಿಗುತ್ತಾ ರಾಜ್ಯ ಕೆಎಂಫ್ ಚುಕ್ಕಾಣೆ..

ಸಿ ಎಂ.ಮಾನಸ ಪುತ್ರನಿಗೆ ಸಿಗುತ್ತಾ ರಾಜ್ಯ ಕೆಎಂಫ್ ಚುಕ್ಕಾಣೆ..
ರಾಜ್ಯ ಕಾಂಗ್ರೆಸ್‌ನಲ್ಲಿ ಚುರುಕು ಗೊಂಡ ಅಧಿಕಾರ ಹಸ್ತಾಂತರ…
ಸಿದ್ದು. ಹಿರೇಮಠ್..
ಬೆಂಗಳೂರು: ಕೆಎಂಫ್ ಚುಕ್ಕಾಣೆಗಾಗಿ ತೀವ್ರ ಪೈಪೋಟಿ ಸಿ ಎಂ, ಡಿ ಸಿ ಎಂ ನಡುವೆ ಹಾಲು ಮಹಾಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆ ಯತ್ತ ಎಲ್ಲರ ಚಿತ್ತ ನೆಟ್ಟಿದೆ ಈಗ ಚುನಾವಣೆ ಸಮೀಪಿಸುತ್ತಿದ್ದು, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ.
ಮೂರು ಜನರ ತೀವ್ರ ಪೈಪೋಟಿ ನಡುವೆ ಹಾಲು ಮಹಾಮಂಡಳದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮೂವರಲ್ಲಿ ಜಿದ್ದಾ ಜಿದ್ದಿ ಸ್ಪರ್ಧೆ ಏರ್ಪಟ್ಟಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ.ಸುರೇಶ್, ರಾಯಚೂರು
ಬಳ್ಳಾರಿ, ಕೊಪ್ಪಳ- , ವಿಜಯ ನಗರ ಒಕ್ಕೂಟದ ಅಧ್ಯಕ್ಷ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ನಡುವೆ ಪೈಪೋಟಿ ನಡೆಯುವ ಚರ್ಚೆ ಜೋರಾಗಿದೆ
ಹಿಂದಿನ ಅವಧಿಯಲ್ಲಿ ನಿಮ್ಮ ಬೆಂಬಲಿಗರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಈ ಅವಧಿಗೆ ನಮ್ಮ ಕಡೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ಕೆಎಂಎಫ್ ಚುಕ್ಕಾಣಿ ಕೊಡಿಸುವ ಭರವಸೆ ಶಿವಕುಮಾರ್ ಅವರದ್ದಾಗಿದೆ. ಆದರೇ ಸಿ. ಎಂ ಸಿದ್ದರಾಮಯ್ಯ ಅವರು ಮಾನಸ ಪುತ್ರ ಕೆ,ರಾಘವೇಂದ್ರ ಹಿಟ್ನಾಳ ಪರ ಗಟ್ಟಿಯಾಗಿ ನಿಂತಿದ್ದಾರೆ ಹಾಗೂ ಸೋಮವಾರ ಹಿಟ್ನಾಳ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಹಿಂದಿನ ಅವಧಿಯಲ್ಲಿ ಕೆ ರಾಘವೇಂದ್ರ ಹಿಟ್ನಾಳ್ ಮೂರುರುಬಾರಿ ಶಾಸಕರಾಗಿ ಸಚಿವ ಸ್ಥಾನದಿಂದ ವಂಚಿತ ಆಗಿದ್ದಾರೆ ಮತ್ತು ರಾಘವೇಂದ್ರ ಹಿಟ್ನಾಳ್ ಅವರಿಗೆ ಈ ಭಾರಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹಿಟ್ನಾಳ್ ಇದ್ದಾರೆ, ಈ ಹಿಂದೆ ಅವಕಾಶ ತಪ್ಪಿದ್ದರಿಂದ ನನಗೂ ಒಂದು ಅವಕಾಶ ಮಾಡಿಕೊಡಿ ಎಂದು ನಂಜೇಗೌಡ ಅವರು ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆಯಾಗಿ ಇಬ್ಬರು ಮಹಾ ನಾಯಕರ ನಡುವೆ ಯಾರ ಆಪ್ತರಿಗೆ ಕೆ ಎಂ ಎಂಫ್ ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.




