news

ಯಲಬುರ್ಗಾ ತಾಲೂಕ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಯಲಬುರ್ಗಾ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಲಬುರ್ಗಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ ಅವರ ನೇತೃತ್ವದಲ್ಲಿ ನಡೆಯಿತು. 16 ಜನ ಯಲಬುರ್ಗಾ ಸದಸ್ಯರ ಪೈಕಿ 15 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಮೊದಲು ಎಲ್ಲಾ ಪದಾಧಿಕಾರಿಗಳ ಮನವೋಲಿಸಿ ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನಿಸಲಾಯಿತು. ಆದ್ರೆ ಒಮ್ಮತದ ನಿರ್ಧಾರ ಬಾರದೇ ಇದ್ದಿದ್ದರಿಂದ ಈ ಹಿಂದೆ ರಾಜ್ಯ ಘಟಕ ನೀಡಿದ ಸೂಚನೆಯಂತೆ ಗೌಪ್ಯ ಮತದಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲು ಮಾಟರಂಗಿ, ರವಿ ಚಲವಾದಿ ಸ್ಪರ್ಧೆ ಮಾಡಿದ್ರು. ಈ ಪೈಕಿ ಮಲ್ಲು ಮಾಟರಂಗಿ 8 ಮತಗಳು ಪಡೆದು ಆಯ್ಕೆಯಾದ್ರೆ, 7 ಮತಗಳು ಪಡೆದ ರವಿ ಚಲವಾದಿ ಪರಾಭವಗೊಂಡರು.
ಇನ್ಮೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ ಬಂಡ್ರಿ, ವಿರೇಶ್ ಸ್ಟಾಂಪಿನ್ ಸ್ಪರ್ಧೆ ಮಾಡಿದ್ರು. ಸಂತೋಷ ಬಂಡ್ರಿ 8 ಮತಗಳು ಪಡೆದು ಆಯ್ಕೆಯಾದ್ರೆ, ವಿರೇಶ್ ಸ್ಟಾಂಪಿನ 7 ಮತಗಳು ಪಡೆದು ಪರಾಭವಗೊಂಡರು ‌.

ನೂತನ ಅಧ್ಯಕ್ಷರಾಗಿ ಮಲ್ಲು ಮಾಟರಂಗಿ, ಪ್ರಧಾಕ ಕಾರ್ಯದರ್ಶಿಯಾಗಿ ಸಂತೋಷ ಬಂಡ್ರಿ ಅಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ರು.
ಈ ಸಂಧರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ವೀರಣ್ಣ ಕಳ್ಳಿಮನಿ, ಪ್ರಧಾನ ಕಾರ್ಯದರ್ಶಿ ನಾಗರಾಜ್. ವೈ ಸೇರಿದಂತೆ ಯಲಬುರ್ಗಾ ತಾಲೂಕಾ ಘಟಕದ ಸದಸ್ಯರು ಹಾಜರಿದ್ದರು

ಈ ಸಂಧರ್ಭದಲ್ಲಿ ಪಾರದರ್ಶಕ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button