ಗಂಗಾವತಿ

ನಿರ್ದೇಶಕ ಮಧುಸೂಧನ ಹವಲ್ದಾರರ ಶ್ರೀಜಗನ್ನಾಥ ದಾಸರು ಭಾಗ ೦೨ ಪ್ರದರ್ಶನ ಶುಭಾರಂಭ

ನಿರ್ದೇಶಕ ಮಧುಸೂಧನ ಹವಲ್ದಾರರ
ಶ್ರೀಜಗನ್ನಾಥ ದಾಸರು ಭಾಗ ೦೨ ಪ್ರದರ್ಶನ ಶುಭಾರಂಭ

ಗ0ಗಾವತಿ: ನಗರದ ಶಿವೆ ಚಿತ್ರಮಂದಿರದಲ್ಲಿ ಶುಕ್ರವಾರ ಸಂಜೆ ಹೆಸರಾಂತ ಯಶಸ್ವಿ ನಿರ್ದೇಶಕ ಶ್ರೀ ಮಧುಸೂದನ ಹವಲ್ದಾರರ ಶ್ರೀ ಜಗನ್ನಾಥ ದಾಸರು ಭಾಗ ೦೨ ಚಲನಚಿತ್ರ ಪ್ರದರ್ಶನ ಅದ್ಧೂರಿ ಶುಭಾರಂಭಗೊAಡಿತು. ಪ್ರತಿದಿನ ಸಂಜೆ ಎರಡು ಪ್ರದರ್ಶನ ಏರ್ಪಡಿಸಲಾಗಿದ್ದು ಕನ್ನಡ ಭಕ್ತಪ್ರದಾನ ಚಿತ್ರಕ್ಕೆ ಕಲಾಭಿಮಾನಿಗಳು ಪ್ರತ್ಸಾಯಿಸಬೇಕಿದೆ. ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗು ರಾಜಮಾತೆ ಲಲಿತಾರಾಣಿ ಶ್ರೀರಂಗದೇವರಾಯಲು ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊಪ್ಪಳ, ರಾಯಚೂರು ಹಾಗು ವಿಜಯನಗರ ಭಾಗಗಳಲ್ಲಿ ಹೆಚ್ಚು ನಡೆದಾಡಿದ ದಾಸರ ಚರಿತೆಯನ್ನು ಇಡೀ ಚಲನಚಿತ್ರದ ಮೂಲಕ ವಿಶ್ವಕ್ಕೆ ಪರಿಚಯಿಸುತ್ತಿರುವ ಚಿತ್ರತಂಡದ ಕಾರ್ಯ ಶ್ಲಾಘನೀಯ ಜೊತೆಗೆ ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ಹೆಮ್ಮೆಯ ಸಂಗತಿ ಈಗಾಗಲೆ ಶ್ರೀ ಜಗನ್ನಾಥ ದಾಸರು, ಶ್ರೀ ಪ್ರಸನ್ನ ವೆಂಕಟದಾಸರು, ಶ್ರೀ ವಿಜಯ ದಾಸರು ಚಿತ್ರಗಳು ತುಂಬಿದ ಗೃಹಗಳಿಂದ ಪ್ರದರ್ಶನಗೊಂಡು ಯಶಸ್ಸುಗಳಿಸಿದ್ದು, ವಿದೇಶಗಳಲ್ಲೂ ತಮ್ಮ ಕಂಪು ಹರಡಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದರು. ಈ ಚಿತ್ರದಲ್ಲಿ ನಟಿಸಿದ ನಿರ್ಮಾಪಕ. ನಟ ವಿಷ್ಣುತೀರ್ಥ ಜೋಷಿ ಹಾಗು ಹಾಸ್ಯ ಭಾಷಣಕಾರರು ಮತ್ತು ನಟ ನರಸಿಂಹ ಜೋಷಿ ಹಾಗು ನಟರಾದ ಶರದದಂಡೀನ ವಕೀಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅಮರಜ್ಯೋತಿ ವೆಂಕಟೇಶ್, ಸಂತೋಷ್ ಕೇಲೋಜಿ, ನಗರಸಭೆ ಮಾಜಿ ಸದಸ್ಯ ವಾಸುದೇವ ನವಲಿ, ಡಾ. ಶಿವಕುಮಾರ್ ಮಾಲಿಪಾಟೀಲ್, ಅಸೋಸಿಯೇಟ್ ನಿರ್ದೇಶಕರಾದ ಅಕ್ಷಯ್ ಕುಮಾರ್ ಬರಗೂರು, ಗೀತಾ ವಿಕ್ರಮ್, ನಾಗರಾಜ್ ಗುತ್ತೇದಾರ್ ವಕೀಲರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಗೌರವಧ್ಯಕ್ಷ ನಾಗರಾಜ್ ಇಂಗಳಗಿ, ಸರ್ವೇಶ್ ವಸ್ತçದ್, ದಾಸನಾಳ ಶ್ರೀನಿವಾಸ್ ಇತರೆ ಗಣ್ಯರು ಪಾಲ್ಗೊಂಡಿದ್ದರು. ನಟರಾದ ಶರದ ದಂಡೀನ ವಕೀಲರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Back to top button