Breking news

ಕೊಪಣಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ಡಾ. ಮಹಾಂತೇಶ್ ಮಲ್ಲನಗೌಡರ್

ಕೊಪಣಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ಡಾ. ಮಹಾಂತೇಶ್ ಮಲ್ಲನಗೌಡರ್

ಕೊಪ್ಪಳ,: ಯಾವುದೇ ಜಾತಿ ಭೇದ ಭಾವವಿಲ್ಲದೆ ಎಸ್ಎಸ್ಎಲ್ ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಕೊಪಣಾ ಟ್ರಸ್ಟ್ ಸನ್ಮಾನಿಸಿ ಗೌರವಿಸಿದ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ ಹೇಳಿದರು.

ಶುಕ್ರವಾರ ನಗರದ ಗವಿಮಠ ಹತ್ತಿರ ಇರುವ ಶ್ರೀ ಮೇದಾರ ಶ್ರೀ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಕೊಪಣಾ ಟ್ರಸ್ಟ್ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಪ್ಪಳ ಐತಿಹಾಸಿಕ ನಗರವಾಗಿದ್ದು ಕೊಪಣಾ ಟ್ರಸ್ಟ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಹೆಚ್ಚಿನ ಸಾಧನೆಗೈಯಲು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸುವ ಕಾರ್ಯ ಉತ್ತಮವಾದದ್ದು, ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಕೈ ತೊಳೆದುಕೊಂಡು ಮುಟ್ಟಬೇಕು ಅವು ಪವಿತ್ರವಾದವು, ಇನ್ನು ಹೆಚ್ಚು ಸಾಧನೆಗೈದು ತಂದೆ-ತಾಯಿಗೆ ಗುರುಗಳಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರಿಯ ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ ಮಾತನಾಡಿ, ಕೊಪಣಾ ಟ್ರಸ್ಟ್ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿಭೆಗೆ ಬಡವ ಶ್ರೀಮಂತ ಎನ್ನುವ ಭೇದ ಭಾವವಿರುವುದಿಲ್ಲ ಪ್ರತಿಭಾವಂತರು ಎಲ್ಲಿದ್ದರೂ ಸಾಧನೆಗೈಯುತ್ತಾರೆ, ಪ್ರತಿಭಾ ಪುರಸ್ಕಾರ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ, ಇಂಥ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ, ಮಕ್ಕಳು ಹೆಚ್ಚು-ಹೆಚ್ಚು ಸಾಧನೆ ಮಾಡಿ ತಂದೆ-ತಾಯಿಗಳಿಗೆ ಕಳಿಸಿದ ಗುರುಗಳಿಗೆ ಕೀರ್ತಿ ತರುವಂತೆ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸ್ವಾಮಿ ವಿವೇಕಾನಂದ ಶಾಲೆಯ ಎಸ್.ಸಿ. ಹಿರೇಮಠ ನೆರವೇರಿಸಿ ಮಾತನಾಡಿ, ಸಾಧನೆಗೈದ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಇಂದು ಸನ್ಮಾನಗೊಳ್ಳುತ್ತಿದ್ದೀರಿ ಮುಂದೆ ಸಹ ಹೆಚ್ಚು ಸಾಧನೆಗೈವುವಂತೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪಣಾ ಟ್ರಸ್ಟ್ ಗೌರವಾಧ್ಯಕ್ಷರಾದ ನೀಲಕಂಠಯ್ಯ ಹಿರೇಮಠ ವಹಿಸಿದ್ದರು. ಇದೇ ವೇಳೆ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯರಾದ ಮಲ್ಲಪ್ಪ ಕವಲೂರು, ಗುರುರಾಜ ಹಲಗೇರಿ, ಸಮಾಜ ಸೇವಕ ಹನುಮರೆಡ್ಡಿ ಹೊಸಮನಿ,ಉಪನ್ಯಾಸಕರಾದ ಶಿವನಗೌಡ ಪೋಲೀಸ್ ಪಾಟೀಲ, ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸಿದ್ದು, ಕೊಪಣಾ ಟ್ರಸ್ಟ್ ಅಧ್ಯಕ್ಷ ಗವಿಸಿದ್ದಯ್ಯ ಲಿಂಗಬಸಯ್ಯಮಠ, ಉಪಾಧ್ಯಕ್ಷ ನಾಗಭೂಷಣ ಸಾಲಿಮಠ, ಖಜಾಂಚಿ ವಿಜಯ ವಸ್ತ್ರದ, ಪ್ರಧಾನ ಕಾರ್ಯದರ್ಶಿ ಪಿಬಿ ಹಿರೇಮಠ, ಟ್ರಸ್ಟ್‌ನ ಸಂಚಾಲಕ ಶಿವಕುಮಾರ್ ಹಿರೇಮಠ, ಸದಸ್ಯರಾದ ಮಂಜುನಾಥ ಗದಗಿನಮಠ, ಪುಟ್ಟು ಶಾಸ್ತ್ರೀ, ವಿರೇಶ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಕಾರ್ಯದರ್ಶಿ ಶಶಿ‌ಕುಮಾರ ಗಡ್ಡಿ ಸ್ವಾಗತಿಸಿ, ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button