Breking news

ಶ್ರೀ ಗವಿಸಿದ್ಧೇಶ್ವರ ಗುರುಕುಲ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ

ಶ್ರೀ ಗವಿಸಿದ್ಧೇಶ್ವರ ಗುರುಕುಲ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ

ಕೊಪ್ಪಳ– ಶ್ರೀ ಶಿವಶಾಂತವೀರ ಮಹಾಸ್ವಾಮೀಜಿ ಚಾರಿಟೇಬಲ್ ಟ್ರಸ್ಟಿನ ಅಡಿಯಲ್ಲಿ ತಾಲೂಕಿನ ಕೋಳೂರು-ಕಾಟ್ರಳ್ಳಿಯ ಹತ್ತಿರ ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು, ವಸತಿ ನಿಲಯ ಹಾಗೂ ಉಟದ ಸಭಾಂಗಣಗಳ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು ಬೆಳಿಗ್ಗೆ ೧೦.೩೦ ಕ್ಕೆ ಜರುಗಿತು. ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಮುಂಡರಗಿಯ ಶ್ರೀ ಮ ನಿ ಪ್ರ ಜ ನಾಡೋಜ ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು, ಮುಂಡರಗಿಯ ಅನ್ನದಾನೇಶ್ವರ ಮಠಕ್ಕೂ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೂ ಅವಿನಾಭಾವ ಸಂಬAಧವಿದೆ. ಮರಿಶಾಂತವೀರ ಮಹಾಸ್ವಾಮಿಗಳವರ ಆಶೀರ್ವಾದ ಜೊತೆಗೆ ಶ್ರೀ ಶಿವಶಾಂತವೀರ ಸ್ವಾಮೀಜಿಯವರ ವಿಶ್ವಾಸವನ್ನು ಪಡೆದವರು ನಾವು. ಶ್ರೀ ಗವಿಸಿದ್ದೇಶ್ವರ ಗುರುಕುಲ ವಿಶೇಷವಾದ ವಾಸ್ತುಶಿಲ್ಪ, ಸಭಾಭವನ, ಕಾಲೇಜಿನ ವಿನ್ಯಾಸ ಬಹಳ ಆಕರ್ಷಣೆಯಾಗಿದೆ. ಇದು ನಾಡಿನ ಹೆಮ್ಮೆಯಾಗಿದೆ. ಮಹಿಳಾ ಸಬಲೀಕರಣಕ್ಕೆ ವಿಶೇಷವಾದ ಸಂಕಲ್ಪ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಹೆಚ್ಚಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಬಹಳ ಶ್ಲಾಘನೀಯ ಕೆಲಸವಾಗಿದೆ. ಈಗಾಗಲೇ ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿದ್ದು, ಪ್ರಸ್ತುತ ಮಹಿಳಾ ವಿದ್ಯಾರ್ಥಿನಿಯರಿಗಾಗಿ ಗುರುಕುಲ ಪದವಿ ಪೂರ್ವ ವಸತಿ ಸಹಿತ ಕಾಲೇಜು ಸ್ಥಾಪಿಸಿದ್ದು ಬಹಳ ಸಂತೋ಼ ತಂದಿದೆ. ಶ್ರೀ ಮಠವು ಇನ್ನೂ ಉತ್ತರೋತ್ತರವಾಗಿ ಬೆಳೆದು ಹೆಚ್ಚಿನ ಸೇವೆಯನ್ನು ಸಲ್ಲಿಸುವ ಅವಕಾಶ ಕಲ್ಲಿಸುವಂತಾಗಲಿ ಎಂದು ಹೇಳಿದರು.

ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಪ್ರಮುಖರು, ರಾಜ್ಯಸಭಾ ಸದ್ಯಸರು, ಪದ್ಮಶ್ರೀ ಪುರಸ್ಕçತರಾದ ಡಾ. ಪ್ರಭಾಕರ ಕೋರೆ ಮಾತನಾಡಿ ಕರ್ನಾಟಕದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಶ್ರೀಗವಿಮಠದ ಪೂಜ್ಯರಾಗಿದೆ. ಶ್ರೀಗಳ ಕಾರ್ಯ ಸಂತೋಷ ತಂದಿದೆ. ವೀರಶೈವ ಮಠಗಳು ಶೈಕ್ಷಣಿಕ ಸೇವೆಗೆ ನೀಡಿದ ಕೊಡುಗೆ ಅಪಾರವಾಗಿದೆ. ದುಡ್ಡು ನೀಡಿದರೂ ಇಷ್ಟು ಅಚ್ಚುಕಟ್ಟಾದ ಹಾಸ್ಟೆಲ್ ಸಿಗದು, ಅದು ಉಚಿತವಾಗಿ ನೀಡುತ್ತಿರುವುದು ಬಹಳ ಅಭಿಮಾನ ಸಂಗತಿ. ವಿಜಯಪುರದ ಸಿದ್ದೇಶ್ವರ ಶ್ರೀಗಳ ಜೊತೆಗೆ ಹೆಚ್ಚಿನ ಭಕ್ತರನ್ನು ಸಂಪಾದಿಸಿದ ಶ್ರೀಗಳೆಂದರೆ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳಾಗಿದ್ದಾರೆ ಎಂದು ಹೇಳಿದರು.

೨೦೧೫ ನೇ ಬ್ಯಾಚ್‌ನ ಐ.ಎ.ಎಸ್. ೩೧೦ ನೇ ರ‍್ಯಾಂಕ್ ಪಡೆದ ಚಿನ್ಮಯಿ ಮಾತನಾಡಿ ಒಬ್ಬ ವ್ಯಕ್ತಿ ಮುಂದೆ ಬರುವುದಕ್ಕೆ ಪ್ರೋತ್ಸಾಹ ಬಹಳ ಮುಖ್ಯವಾಗಿದೆ ವಿದ್ಯಾರ್ಥಿನಿಯರಿಗೆ ಉಚಿತ ಕಾಲೇಜು ಸ್ಥಾಪಿಸಿರುವದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಆಸರೆಯಾಗಿದೆ ಮತ್ತು ದಾರಿದೀಪವಾಗಲಿದೆ ಎಂದು ಹೇಳಿದರು.

ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಮಾತನಾಡಿ ಗವಿಸಿದ್ದೇಶ್ವರ ಗುರುಕುಲ ಇದೊಂದು ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ. ಒಳ್ಳೆಯ ನಾಗರಿಕರಾಗಿ ಬೆಳೆಯುವದಕ್ಕೆ ಶಿಕ್ಷಣ ಅಗತ್ಯವಾಗಿದೆ. ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ವೀರಶೈವ ಲಿಂಗಾಯತ ಮಠಗಳ ಆಶಯ, ಅನ್ನ, ಅಕ್ಷರ, ಅರಿವಿನ ಮೂಲಕ ವಿಚಾರವನ್ನು ಮೂಡಿಸುವ ಜಾತ್ಯಾತೀತ ಮನೋಭಾವದ ವಿಚಾರವನ್ನು ಒಳಗೊಂಡಿರುವ ಅಪರೂಪದ ಮಠ ಶ್ರೀ ಗವಿಮಠವಾಗಿದೆ. ಉತ್ತಮ ದೂರ ದೃಷ್ಟಿ ಜಾತ್ಯಾತೀತ ಮನೋಭಾವಕ್ಕೆ ಹೆಸರಾದ ಶ್ರೀಮಠ ಮಾನವಿಯ ಅಂತ:ಕರಣದ ಅತ್ಯಂತ ದೊಡ್ಡ ಮಟ್ಟದ ವಿದ್ಯಾಕೇಂದ್ರವಾಗಿದೆ. ವಿದ್ಯೆ ಕೇವಲ ಉದ್ಯೋಗಕ್ಕಾಗಿ ಅಲ್ಲ, ಒಳ್ಳೆತನ ವ್ಯಕ್ತಿತ್ವಕ್ಕಾಗಿ, ಸಮಾಜದಲ್ಲಿ ಸಂಸ್ಕಾರದಿAದ ಬದುಕುವುದಕ್ಕಾಗಿ ವಿದ್ಯಾಭ್ಯಾಸ ಅವಶ್ಯಕತೆ ಇದೆ. ಅಂತಹ ಉತ್ತಮ ವಿದ್ಯ ನೀಡುವ ಕೆಲಸವನ್ನು ಶ್ರೀ ಮಠವು ಮಾಡುತ್ತಿದೆ ಎಂದು ಹೇಳಿದರು.

ಹಾವೇರಿ ಸಂಸದರು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾತನಾಡಿ ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿನಿಯರ ಗುರುಕುಲದಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳೇ ಭಾಗ್ಯವಂತರು. ಒಂದು ಕಾಲ ಇತ್ತು, ಭೂಮಿ ಇದ್ದವರು ಜಗತ್ತನ್ನು ಅಳುತ್ತಾರೆ ಎಂದು, ನಂತರ ಕಾಲ ನಂತರ ಕಾಲದಲ್ಲಿ ಯಾರ ಹತ್ತಿರ ದುಡ್ಡು ಇರುತ್ತದೆ ಅವರು ಜಗತ್ತನ್ನ ಅಳುತ್ತಾರೆ ಎನ್ನುತ್ತಿದ್ದರು, ಆದರೆ ೨೧ನೇ ಶತಮಾನದಲ್ಲಿ ಭೂಮಿ ದುಡ್ಡು ಇದ್ದವರೂ ಅಲ್ಲ ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ಭಾರತzಲ್ಲಿ ಅನೇಕ ವಿದ್ಯಾಸಂಸ್ಥೆಗಳಿವೆ ಅವುಗಳಲ್ಲಿ ಗವಿಮಠ ಶೈಕ್ಷಣಿಕ ಕೊಡುಗೆಗೆ ವಿಶೇಷವಾದ ಹೆಸರನ್ನು ಪಡೆದಿದೆ ಎಂದು ಹೇಳಿದರು.

ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ ಮಾತನಾಡಿ ಇವತ್ತಿನ ದಿನ ಕೊಪ್ಪಳ ಜಿಲ್ಲೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಇತಿಹಾಸ ಇಂದು ನಿರ್ಮಾಣವಾಗಿದೆ. ಹಿಂದುಳಿದ ಜಿಲ್ಲೆಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಇಂತಹ ವಿದ್ಯಾಕೇಂದ್ರ ನಿರ್ಮಾಣವಾಗಿದ್ದು ಬಹಳ ಸಂತೋಷ ತಂದಿದೆ.ಶ್ರೀ ಗವಿಮಠವು ಅಂತ ಸಮಾಜಮುಖಿ ಕೆಲಸವನ್ನು ಬಹಳ ಪ್ರಮಾಣಿಕವಾಗಿ ಮಾಡಿದೆ. ಕೆರೆ ಸಂರಕ್ಷಣೆ, ಹೀರೆಹಳ್ಳ ಸ್ವಚ್ಚತೆ, ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಶ್ರೀಗವಿಮಠದ ಕಾರ್ಯ ಬಹಳ ಅಭಿನಂದನೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಓದುವುದು ಪುಣ್ಯವಂತರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಪೂಜೆ ಮಾಡುವ ಗುಡಿಯಲ್ಲಿ ದೀಪ ಹಚ್ಚುವದಕ್ಕಿಂತ ದೀಪವೆ ಹಚ್ಚದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರ ದೀಪ ಹಚ್ಚುವದು ಪೂಜ್ಯ ಮರಿಶಾಂತವೀರ ಸ್ವಾಮಿಗಳ ಸಂಕಲ್ಪವಾಗಿತ್ತು . ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಜೋಳಿಗೆ ಹಿಡಿದು ಕಾಣಿಕೆ ಬೇಡಲಿಲ್ಲ, ಬದಲಾಗಿ ಶಿಕ್ಷಣವನ್ನು ಕಲಿಸಲು ಜೋಳಿಗೆಯಲ್ಲಿ ಮಕ್ಕಳನ್ನು ಹಾಕಲು ಹೇಳಿದರು. ಅವರ ಸಂಕಲ್ಪವನ್ನು ತಮ್ಮೆಲ್ಲರ ಸಹಕಾರ, ಪ್ರೋತ್ಸಹದಿಂದ ಅದನ್ನು ಸಾಕಾರಗೊಳಿಸುವ ಕೈಕಂಕರ್ಯದಲ್ಲಿ ನಾವು ತೊಡಗಿಕೊಂಡಿದ್ದೆವೆ, ನಾವು ಅವಕಾಶವಿದ್ದರೆ ಭವಿಷ್ಯದಲ್ಲಿ ಬಡ ಗಂಡು ಮಕ್ಕಳಿಗೂ ಸಹ ಉಚಿತ ವಸತಿಯುಕ್ತ ಶಿಕ್ಷಣವನ್ನು ನೀಡು ಸಂಕಲ್ಪ ನಮ್ಮದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಮ ಪೂಜ್ಯರಾದ ಹೆಬ್ಬಾಳ ಬೃಹನ್ಮಠದ ಶ್ರೀ ಷ. ಬ್ರ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು,ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀ ಷ.ಬ್ರ ಕರಿಬಸವ ಮಹಾಸ್ವಾಮಿಗಳು ನಿಡಸೇಸಿ-ಗೆಜ್ಜಿಭಾವಿ ಕುಷ್ಟಗಿ ಹಿರೇಮಠದ ಶ್ರೀ ಷ.ಬ್ರ ೧೦೮ ಅಭಿನವ ಕರಿಬಸವ ಮಹಾಸ್ವಾಮಿಗಳು ಹೊಸಳ್ಳಿ ಸಂಸ್ಥಾನಮಠ, ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮಿಗಳು,ಮೈನಳ್ಳಿ-ಬಿಕನಳ್ಳಿ ಹಿರೇಮಠದ ಶ್ರೀ ಷ. ಬ್ರ ೧೦೮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಸುಕ್ಷೇತ್ರ ಬಿಜಕಲ್‌ನ ಶ್ರೀ ಮ.ನಿ.ಪ್ರ.ಸ್ವ. ಶಿವಲಿಂಗ ಮಹಾಸ್ವಾಮಿಗಳು,ಹಿರೇಸಿಂಧೋಗಿ ಕಪ್ಪತ್ತಮಠದ ಶ್ರೀ ಮ.ನಿ.ಪ್ರ ಚಿದಾನಂದ ಮಹಾಸ್ವಾಮಿಗಳು,ದದೇಗಲ್ ಸಿದ್ಧಾರೂಢಮಠ, ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು,ಸುಕ್ಷೇತ್ರ ಬಳಗಾನೂರಿನ ಪರಮ ಪೂಜ್ಯ ಶ್ರೀ ಶಿವಶಾಂತವೀರ ಶರಣರು,ಭಾಗ್ಯನಗರದ ಶ್ರೀ ಶಂಕರಾಚಾರ್ಯರಮಠದ ಶ್ರೀ ಶಿವಪ್ರಕಾಶನಂದ ಸ್ವಾಮೀಜಿ,ಖಜ್ಜಿಡೋಣಿಯ ಪೂಜ್ಯಶ್ರೀ ಕೃಷ್ಣಾನಂದ ಶಾಸ್ತಿçಗಳು, ಭಾಗವಹಿಸಿದ್ದರು.

ಜನಪ್ರತಿನಿಧಿಗಳಾದ ಹಾವೇರಿ ಸಂಸದರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬೆಳಗಾವಿಯ ರಾಜ್ಯಸಭಾ ಸದ್ಯಸರು, ಪದ್ಮಶ್ರೀ ಪುರಸ್ಜçತರಾದ ಡಾ. ಪ್ರಭಾಕರ್ ಕೋರೆ, ಯಲಬುರ್ಗಾದ ಶಾಸಕರು ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ, ಕೊಪ್ಪಳ ಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ, ಮಾಜಿ ಲೋಕಸಭಾ ಸದಸ್ಯರು, ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರಸನ್ನ ಗಡ್ಡಾದ, ಸಿ.ವಿ ಚಂದ್ರಶೇಖರ, ಬಸವರಾಜ ಕ್ಯಾವಟರ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಗಂಗಾವತಿ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಕನಕಗಿರಿ ಮಾಜಿ ಶಾಸಕರಾದ ಶ್ರೀ ಬಸವರಾಜ ದಡೆಸೂಗೂರು, ಹುಬ್ಬಳ್ಳಿಯ ಗಣ್ಯರಾದ ಶಂಕರಣ್ಣ ಮುನವಳ್ಳಿ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ಕೊಳುರು ಕಾಟ್ರಳ್ಳಿಯ ಮತ್ತು ಸುತ್ತಮುತ್ತಲಿನ ಭಕ್ತರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಗವಿಸಿದ್ಧಪ್ಪ ಕೊಪ್ಪಳ ಶರಣಬಸಪ್ಪ ಬಳಿಯಲೆ ಕಾರ್ಯಕ್ರಮ ನಿರ್ವಹಿಸಿದರು ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button