news

ದಡೇಸೂಗುರು ಠೇವಣಿ ಕಳೆದುಕೊಳ್ಳುವುದು ನಿಶ್ಚಿತ : ರೆಡ್ಡಿ ಶ್ರೀನಿವಾಸ್

ದಡೇಸೂಗುರು ಠೇವಣಿ ಕಳೆದುಕೊಳ್ಳುವುದು ನಿಶ್ಚಿತ : ರೆಡ್ಡಿ ಶ್ರೀನಿವಾಸ್

ಮಾಜಿ ಶಾಸಕರು ಸ್ವಲ್ಪ ಪರಿಜ್ಞಾನದಿಂದ ಮಾತನಾಡಲಿ : ಜ್ಯೋತಿ

ಕೊಪ್ಪಳ: ಮುಂಬರುವ ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೇಸೂಗುರು ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ ಎಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.

ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಅವರ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು. ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕೊಪ್ಪಳದಲ್ಲಿ ಅದ್ದೂರಿಯಾಗಿ ಯಶಸ್ವಿಯಾಗಿ ಜರುಗಿದ್ದು ರಾಜ್ಯ ಗ್ಯಾರಂಟಿ ಅಧ್ಯಕ್ಷ ರೇವಣ್ಣ ಅವರೇ ಸಂತೋಷಗೊಂಡಿದ್ದಾರೆ. ಅದರಲ್ಲಿ ಪಾಲ್ಗೊಂಡ ಎಲ್ಲರೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ಅಲ್ಲಿ ಯಾರನ್ನು ಹಣ, ವಾಹನ ಕೊಟ್ಟು ಕರೆದುಕೊಂಡು ಬಂದಿಲ್ಲ ಎಲ್ಲಾ ಫಲಾನುಭವಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು, ಸಭಾಂಗಣ ಫಲಾನುಭವಿಗಳಿಂದ ಭರ್ತಿಯಾಗಿದ್ದು, ಅದಕ್ಕೆ ಸಂಬಂಧಸಿದ ಪೋಟೋಗಳು ಮತ್ತು ವಿಡಿಯೋಗಳನ್ನು ಬಸವರಾಜ್ ದಡೇಸೂಗೂರು ಅವರಿಗೆ ಕಳಿಸಿಕೊಡುತ್ತೇವೆ

ಎಣಿಸಿಕೊಳ್ಳಲಿ ಯಶಸ್ಸನ್ನು ಗಮನಿಸಿದ ದಡೇಸೂಗುರು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಈ ಉತ್ಸವಕ್ಕೆ ಜಿಲ್ಲೆಯ ಫಲಾನುಭವಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದಾರೆ,

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕಾಂಗ್ರೇಸ ಜಿಲ್ಲಾಧ್ಯಕ್ಷರು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಸೇರಿದಂತೆ ಎಲ್ಲಾ ಮುಖಂಡರ ಸಮ್ಮುಖದಲ್ಲಿ ಕಾರ್ಯಕ್ರಮ ನಿರ್ಧಾರ ಮಾಡಲಾಗಿದೆ.

ಆದರೆ ಬೇರೆ ಬೇರೆ ಕೆಲಸಗಳ ನಿಮಿತ್ಯ ಪಾಲ್ಗೊಳ್ಳಲು ಆಗಿಲ್ಲ, ಆದರೆ ಬಸವರಾಜ ದಡೇಸೂಗುರು ರವರು ಬಿಜೆಪಿಯ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೇ, ಜನರೇ ಇರುವುದಿಲ್ಲ, ಅದು ಬಿಟ್ಟು ಗ್ಯಾರಂಟಿ ಕಾರ್ಯಾಗಾರದಲ್ಲಿ ಜನ ಇರಲಿಲ್ಲ ಎಂದು ಹೇಳುವುದು ಸತ್ಯಕ್ಕೆ ದೂರವಾದದ್ದು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಯಾವುದೋ ಹಳೆ ವಿಡಿಯೋವನ್ನು ಇಟ್ಟುಕೊಂಡು ಪ್ರಚಾರ ಪಡೆದುಕೊಳ್ಳಲು. ಬಸವರಾಜ ದಡೇಸೂಗುರು ಯತ್ನಿಸುತ್ತಿದ್ದಾರೆ, ಅವರ ವಿಡಿಯೋಗಳು ಸಹ ಬಹಳಷ್ಟು ಇದ್ದು, ಸಚಿವ ಶಿವರಾಜ ತಂಗಡಗಿಯವರ ಸಹ ಶೀಘ್ರದಲ್ಲೆ ಬಿಡುಗಡೆಗೊಳಿಸುವವರು. ಬಸವರಾಜ ದಡೇಸೂಗುರು ನೀಡಿದ ವಿಡಿಯೋ ಭೋವಿ ಸಮಾಜದವರು ಶ್ರೀ ಸಿದ್ದರಾಮೇಶ್ವರ ಜಯಂತಿ, ಜಾತ್ರೆ ಸಂಬಂಧ ದೇಣಿಗೆಗಾಗಿ ಬಂದಾಗ ಅವರಿಗೆ ದೇಣಿಗೆ ಕೊಡುವುದಾಗಿ ಹೇಳಿದ್ದಾರೆ, ಅದರಲ್ಲಿ ಒಬ್ಬ ಯುವಕ ಸಚಿವರಿಗೆ ಏಕ ವಚನದಲ್ಲಿ ಮಾತನಾಡಿದಾಗ ಸಚಿವರಿಗೆ ಸಿಟ್ಟು ಬಂದ ಕಾರಣ ಸಹಜವಾಗಿ ಆ ಯುವಕನಿಗೆ ಸಿಟ್ಟಿನಿಂದ ಮಾತನಾಡಿದ್ದಾರೆ. ಅದು ಸಹಜ ಕೋಪ. ಈ ಹಿಂದೆ ಬಸವರಾಜ ದಡೇಸೂಗುರು ಶಾಸಕರಾಗಿದ್ದಾಗ, ಪಿಎಸ್‌ಐ ನೌಕರಿ ವಿಚಾರವಾಗಿ ದೂರವಾಣಿಯಲ್ಲಿ ಯುವಕನಿಗೆ, ತಾವು ಹೇಗೆ ಮಾತನಾಡಿದ್ದಾರೆ ಎಂಬುವುದು ಇಡೀ ರಾಜ್ಯದ ಜನತೆ ಕೇಳಿದ್ದಾರೆ ಅದನ್ನು ನಾನು ಹೇಳಬೇಕಾಗಿಲ್ಲ ಆಗ ನಿಮಗೆ ಸಂಸ್ಕೃತಿ ಇರಲಿಲ್ಲವಾ?

ಕನಕಗಿರಿ ವಿಧಾನ ಸಭೆ ಕ್ಷೇತ್ರದಲ್ಲಿ ತಾವು ಶಾಸಕರಾಗಿದ್ದಾಗ ಎಷ್ಟು ಜಾತಿ ನಿಂದನೆ ಪ್ರಕರಣಗಳು, ದಾಖಲಾಗಿದ್ದವು ಎಂಬುದನ್ನು ಶೀಘ್ರದಲ್ಲಿ ದಾಖಲೆ ಸಮೇತ ನೀಡುತ್ತೇವೆ, ವಿನಾಕಾರಣ ಸಚಿವ ತಂಗಡಗಿಯವರ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ, ಅವರು ಎಷ್ಟೋ ಪ್ರಕರಣಗಳನ್ನು ಅವರವರಿಗೆ ಮಾತುಕತೆ ಮೂಲಕ ಬಗಿಹರಿಸಿಕೊಳ್ಳಲು ತಿಳಿಸಿದ್ದಾರೆ. ವಿನಾಕಾರಣ ಆರೋಪಗಳನ್ನು ಮಾಡುವುದನ್ನು ದಡೇಸುಗೂರು ನಿಲ್ಲಿಸಲಿ ಎಂದರು.

ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನದ ಸದಸ್ಯರು ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಮಾಜಿ ಶಾಸಕರಾದ ಬಸವರಾಜ ದಡೆಸೂಗೂರ ಅವರು ಸ್ವಲ್ಪ ತಿಳಿದುಕೊಂಡು ಪರಿಜ್ಞಾನದಿಂದ ಮಾತನಾಡುವದು ಸೂಕ್ತ, ಅವರು ಹೇಳಿದ ಕೆಲವು ಹೆಸರು ಸರಕಾರದ ಪ್ರೊಟೊಕಾಲ್ ನಲ್ಲಿ ಬರಲ್ಲ ಅದಕ್ಕಾಗಿ ಅವರು ಭಾಗವಹಿಸಲು ಬರಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲ. ಅವರು ಗದ್ದೆ ಜೂಜು ಆಡಲು ಕೇಳುತ್ತಿದ್ದಾರೆ ಹಾಗೆ ನಾವು ಅನಾಗರಿಕವಾಗಿ ಮಾತನಾಡಲ್ಲ, ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದರು. ಕೊಪ್ಪಳ ತಾಲೂಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ ಗೋರಂಟ್ಲಿ, ಗ್ಯಾರಂಟಿ ಸದಸ್ಯ ಅನ್ನದಾನಸ್ವಾಮಿ, ಕಾರಟಗಿ ಅಧ್ಯಕ್ಷ ದೇವಪ್ಪ ಭಾವಿಕಟ್ಟಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button