Breking news

ಕೊಪ್ಪಳ ನಗರಸಭೆ ಅಧಿಕಾರಿ ವೆಂಕಟೇಶ ನಾಗನೂರ ಅವರೇ ನಿಮ್ಮ ಕಾರ್ಯವೈಖರಿ ಇದೆನಾ..!?

ಎಂಟು (8) ದಿನದಿಂದ ಗಬ್ಬೆದ್ದು ನಾರುತ್ತಿವೆ ವಾರ್ಡ್ಗಳು ಮನೆ ಮುಂದಿನ ಕಸದ ದುರ್ನಾತದಲ್ಲಿ ಸಾರ್ವಜನಿಕರು..

ಎಂಟು (8) ದಿನದಿಂದ ಗಬ್ಬೆದ್ದು ನಾರುತ್ತಿವೆ ವಾರ್ಡ್ಗಳು ಮನೆ ಮುಂದಿನ ಕಸದ ದುರ್ನಾತದಲ್ಲಿ ಸಾರ್ವಜನಿಕರು…

ಕೊಪ್ಪಳ ನಗರಸಭೆ ಅಧಿಕಾರಿ ವೆಂಕಟೇಶ ನಾಗನೂರ ಅವರೇ ನಿಮ್ಮ ಕಾರ್ಯವೈಖರಿ ಇದೆನಾ..!?

ಎಸ್. ಎಂ. ಹಿರೇಮಠ

ಕೊಪ್ಪಳ : ನಗರದಲ್ಲಿ ಕಸ ವಿಲೇವಾರಿಯಲ್ಲಿ ಮತ್ತೆ ಅವ್ಯವಸ್ಥೆ ತಾಂಡವವಾಡುತ್ತಿದೆ ಕಳೆದ ಎಂಟ ರಿಂದ ಹತ್ತು ದಿನದಿಂದ ಕಸದ ವಾಹನ ಬರದೇ ಸಾರ್ವಜನಿಕರು ಕಸದ ವಾಹನ ಯಾವಾಗ ಬರುತ್ತೋ ಎಂದು ದಿನಾಲೂ ಕಾಯುವುದು ಕೆಲಸವಾಗಿದೆ ನಗರದ ಹಲವು ಕಡೆಗಳಲ್ಲಿ ಕಸ ಸಂಗ್ರಹ ಮಾಡದೆ, ಕಸದ ವಾಹನ ಬಾರದೆ ಹಲವು ದಿನಗಳು ಕಳೆದಿದ್ದರು ಇನ್ನೂ ವಾಹನ ಬರುತ್ತಿಲ್ಲ ಎಂದು ಪದಕಿ ಕಾಲೋನಿ ಸೇರಿದಂತೆ ವಿವಿಧ ಕಾಲೋನಿ ಸಾರ್ವಜನಿಕ ಆರೋಪಿಸಿದ್ದಾರೆ.

(8)ಎಂಟು ದಿನಗಳಾಯಿತು ಪದಕಿ ಕಾಲೋನಿಗೆ ಕಸ ಸಂಗ್ರಹ ವಾಹನ ಬಾರದೇ  ದಿನಗಳು ಕಳೆಯಿತು. ಹೀಗೆ ಹಲವು ವಾರ್ಡ್ ಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ತುಂಬಿ ತುಳುಕುತಿದೆ. ಸಾರ್ವಜನಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಕಸ ಸಂಗ್ರಹಿಸದೆ, ಕಸ ವಿಲೇವಾರಿ ನಡೆಸದೆ ಪುರಸಭೆ ಏನು ಮಾಡುತಿದೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ..?. ಕಸ ಸಂಗ್ರಹಿಸುವ ವಾಹನಗಳು, ಕಾರ್ಮಿಕರು ಎಲ್ಲಿ ಹೋಗಿದ್ದಾರೆ..? ಸ್ವಚ್ಛ ನಗರ, ಹಸಿರು ನಗರ ಎಂಬೆಲ್ಲ  ಬೋರ್ಡ್ ಹಾಕಿಕೊಳ್ಳುವ ಅಧಿಕಾರಿಗಳು ಯಕಶ್ಚಿತ್ ಮನೆ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಕೂಡ ಸಾಧ್ಯವಾಗುವುದಿಲ್ಲವಾ..? ಎಂಬ ಪ್ರಶ್ನೆ ಸಾಮಾನ್ಯ ಜನರದ್ದು ಹೀಗಾದರೆ ಯಾವ ರೀತಿಯ ಸ್ವಚ್ಛ ನಗರ ಮಾಡಲು ಸಾಧ್ಯ? ಸ್ವಚ್ಛ ನಗರ ಎಂಬುದು ಕೇವಲ ಪ್ರಚಾರದ ಪ್ರಹಸನವಾ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಅಧಿಕಾರಿ ವೆಂಕಟೇಶ ನಾಗನೂರ ಅವರೇ ನಿಮ್ಮ ಕಾರ್ಯವೈಖರಿ ಇದೆ ನಾ..!?

ನಗರದಲ್ಲಿ ಕಸ ಸಂಗ್ರಹ ಮಾಡದ ಬಗ್ಗೆ ನಗರ ಪುರಸಭೆ ಅಧಿಕಾರಿಗಳ ಗಮನಕ್ಕೆ ಹಾಳಾವುಭಾರಿ ತಂದರು ‘ಕೂಡಲೇ ಕ್ರಮ ವಹಿಸುತ್ತೇವೆ’ ಎಂದು ಹೇಳಿ ಸುಮ್ಮನಾಗಿದ್ದಾರೆ ಎನ್ನುವದು ನಿವಾಸಿಗಳ ಆರೋಪ,19 20 ನೇ ವಾರ್ಡ್ ಒಟ್ಟಿನಲ್ಲಿ ಲೇಔಟ್ಕ ನಿವಾಸಿಗರ ಮನೆಮುಂದೆ ಕಸ ತುಂಬಿ ದುರ್ವಾಸನೆ ಬೀರುತ್ತಿದ್ದರೂ, ಕಸ ಸಂಗ್ರಹಿಸದೆ, ತ್ಯಾಜ್ಯ ಸಮಸ್ಯೆ ಪರಿಹರಿಸಲಾಗದೆ ವಾರ್ಡ್ಜ   ನ ಪ್ರತಿನಿಧಿಗಳು, ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಂಡು ಇನ್ನುಳಿದ ದಿನಗಳಲ್ಲಿ ವಾರ್ಡ್ಅ ಸಮಸ್ಯೆ ಬಗೆಹರಿಸುವಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಾರೆ ಹೀಗಾದರೆ ಹೇಗೆ… ಮತ್ತು ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಸಾರ್ವಜನಿಕರು ಮಾತ್ರ ಕಸವನ್ನು ಏನು ಮಾಡಬೇಕು ಎಂದು ತೋಚದೆ ನಗರಸಭೆ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button