ಹಿರೇಸಿಂದೋಗಿ ಗುರುಚನ್ನಬಸವೇಶ್ವರ ಕಪ್ಪತ್ತಮಠದ 100ನೇ ರಥೋತ್ಸವ*

*ಹಿರೇಸಿಂದೋಗಿ ಗುರುಚನ್ನಬಸವೇಶ್ವರ ಕಪ್ಪತ್ತಮಠದ 100ನೇ ರಥೋತ್ಸವ*
ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ”ಶ್ರೀ ಗುರುಚನ್ನಬಸವೇಶ್ವರ ಕಪ್ಪತ್ತಮಠದ 100ನೇ ರಥೋತ್ಸವದ ದಿನಾಂಕ : 27-02-2026 ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಡೋಜ ಶ್ರೀ ಅನ್ನದಾನೀಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ, ಮುಂಡರಗಿ ಹಾಗೂ ಅಧ್ಯಕ್ಷತೆಯನ್ನು ಶ್ರೀ ಮ.ನಿ.ಪ್ರ.ಸ್ವ. ಜಗದ್ಗುರು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀಗವಿಮಠ, ಕೊಪ್ಪಳ ಇವರು ವಹಿಸಲಿದ್ದಾರೆ
ಶ್ರೀ ಮ.ನಿ.ಪ್ರ.ಸ್ವ ಚಿದಾನಂದ ಮಹಾಸ್ವಾಮಿಗಳು, ಕಪ್ಪತ್ತಮಠ, ಹಿರೇಸಿಂದೋಗಿ ಇವರ ಅಪ್ಪಣೆಯ ಮೇರೆಗೆ ಸದ್ಭಕ್ತರ ಸದಿಚ್ಛೆಯಂತೆ ನಡೆಯುವ ಕಾರ್ಯಕ್ರಮಗಳು
ಶ್ರೀ ಮ. ನಿ. ಪ್ರ. ಸ್ವ. ಲಿಂ. ಶ್ರೀ ತೋಟಪ್ಪಯ್ಯ ಮಹಾಸ್ವಾಮಿಗಳವರ 56ನೇಯ ವರ್ಷದ ಪುಣ್ಯ ದಿನಾಚರಣೆ ಮತ್ತು ಬೆಳಿಗ್ಗೆ 5-00 ಘಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕವು ಶ್ರೀ ವೇ. ವಿರುಪಾಕ್ಷಯ್ಯ ವೀರಯ್ಯ ಗುರುಮಠ ಮತ್ತು ಪಂಚಯ್ಯ ವೀರಯ್ಯ ಗುರುಮಠ ಇವರಿಂದ ನೆರವೇರುವುದು ನಂತರ ಮಧ್ಯಾಹ್ನ : 12-00 ಘಂಟೆಗೆ ಮಹಾಗಣಾರಾಧನೆ ನೆರವೇರುವುದು
ಸಾಯಂಕಾಲ : 5-00 ಘಂಟೆಗೆಮಹಾರಥೋತ್ಸವ ಜರುಗುವುದು ರಾತ್ರಿ : 7-45 ಘಂಟೆಗೆ ಧಾರ್ಮಿಕ ಸಮ್ಮೇಳನ ನಡೆಯವುದು
ಶ್ರೀ ಮ.ನಿ.ಪ್ರ.ಸ್ವ, ಶ್ರೀ ಚನ್ನವೀರ ಮಹಾಸ್ವಾಮಿಗಳು, ಲಿಂಗನಾಯಕನಹಳ್ಳಿ, ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಅಗಡಿ ಗುತ್ತಲ, ಶ್ರೀ ಮ.ನಿ.ಪ್ರಸ್ವ, ಶ್ರೀ ಗುರುಲಿಂಗ ಮಹಾಸ್ವಾಮಿಗಳು ಅಕ್ಕಿಮಠ, ಅಗಡಿ,ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುದ್ದಲೀಶ್ವರ ಮಹಾಸ್ವಾಮಿಗಳು, ಹೊಸರಿತ್ತಿ,ಶ್ರೀ ಮ.ನಿ.ಪ್ರ.ಸ್ವ. ಶ್ರೀ ಬಸವರಾಜ ಮಹಾಸ್ವಾಮಿಗಳು, ರಾಮಲಿಂಗೇಶ್ವರಮಠ, ಬೆಳ್ಳಟ್ಟಿ,
ಶ್ರೀ ಮ.ನಿ.ಪ್ರ.ಸ್ವ. ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಗುಡ್ಡದಾನ್ವೇರಿ, ಶ್ರೀ ಮ.ನಿ.ಪ್ರ.ಸ್ವ. ಶ್ರೀ ಚನ್ನಬಸವ ಮಹಾಸ್ವಾಮಿಗಳು, ವಿರಕ್ತಮಠ, ಹಿರೇಮಲ್ಲನಕೇರಿ,ಶ್ರೀ ಮ.ನಿ.ಪ್ರ. ಡಾ॥ ಮಹದೇವ ಮಹಾಸ್ವಾಮಿಗಳು, ಶ್ರೀ ಅನ್ನದಾನೇಶ್ವರ ಶಾಖಾಮಠ, ಕುಕನೂರ, ಶ್ರೀ ಮ.ನಿ.ಪ್ರ.ಸ್ವ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು, ಶಾಖಾ ಗವಿಮಠ, ಬಿಸರಹಳ್ಳಿ,ಶ್ರೀ ಮ.ನಿ.ಪ್ರ.ಸ್ವ ಶ್ರೀ ಡಾ॥ ಹಿರಿಶಾಂತವೀರ ಮಹಾಸ್ವಾಮಿಗಳು, ಹೂವಿನ ಹಡಗಲಿ,
ಶ್ರೀ ಮ.ನಿ.ಪ್ರಸ್ವ ಶ್ರೀ ಚನ್ನಬಸವ ಮಹಾಸ್ವಾಮಿಗಳು, ನೀಲಗುಂದ, ಶ್ರೀ ಷ. ಬ್ರ. 108 ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಮೈನಹಳ್ಳಿ ನೇತೃತ್ವವನ್ನು ವಹಿಸಲಿದ್ದಾರೆದಿನಾಂಕ : 28-02-2026 ಶನಿವಾರ ಸಂಜೆ 7-00 ಘಂಟೆಗೆ ಶ್ರೀ ಬಸವರಾಜ ಅಡವಳ್ಳಿ, ಸಾ॥ ಬನ್ನಿಕೊಪ್ಪ, ಶ್ರೀ ಷರೀಫಸಾಬ ಯಲಿಗಾರ ಸಾ॥ ಬನ್ನಿಕೊಪ್ಪ ತಬಲಾವಾದಕರು : ಶ್ರೀ ನಾಗಯ್ಯ ಶಿವಯ್ಯ ಹಿರೇಮಠ, ಸಾ॥ ಬೇಳೂರು ಸಂಗೀತ ಕಾರ್ಯಕ್ರಮ ನಡೆಯುವುದು
ನಂತರ “ಕಡುಬಿನ ಕಾಳಗ ನೇರವೇರುವುದು ಹಾಗೂ ಮದ್ದು ಸುಡುವುದು ಕಾರಣ ಶ್ರೀಮಠದ ಭಕ್ತಮಂಡಳಿಯವರು ಹರಗುರು ಚರಮೂರ್ತಿಗಳವರ ದರ್ಶನಾಶೀರ್ವಾದ ಪಡೆದು ಕರ್ತೃ ಶ್ರೀ ಚನ್ನಬಸವೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಚನ್ನಬಸವೇಶ್ವರ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ





