ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಶಂಕರಪ್ಪ ಚಾಗಿ ಅವರಿಗೆ ಅಭಿನಂದನೆಗಳ ಮಹಾಪೂರ

ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಶಂಕರಪ್ಪ ಚಾಗಿ ಅವರಿಗೆ ಅಭಿನಂದನೆಗಳ ಮಹಾಪೂರ
ಕೊಪ್ಪಳ : ಜಿಲ್ಲಾ ವಿಮಾ ಅಧಿಕಾರಿಗಳ ಕಚೇರಿ (ಕೆ.ಜಿ.ಐ.ಡಿ)ಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರಪ್ಪ ಚಾಗಿ ಅವರು 2025-26 ನೇ ಸಾಲಿನ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಗೆ ಭಾಜನರಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸ್ಪಂದನೆಯ ಮೂಲಕ ಗುರುತಿಸಿಕೊಂಡಿರುವ ಇವರ ಸೇವೆಯನ್ನು ಪರಿಗಣಿಸಿ ಈ ಗೌರವಾನ್ವಿತ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ವಿಮಾ ಅಧಿಕಾರಿಗಳ ಕಚೇರಿಯ ಜಿಲ್ಲಾ ವಿಮಾಧಿಕಾರಿಗಳಾದ ಆನಂದ್ ಎಸ್. ಮಸ್ಕಿಕರ್ ಅವರು ಶಂಕರಪ್ಪ ಚಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಉತ್ತಮ ಸೇವೆಯನ್ನು ನೀಡುವಂತೆ ಶುಭ ಹಾರೈಸಿದರು.
ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರು ಮಂಜುನಾಥ ಬೆಲ್ಲದ ಸರ್ ಮತ್ತು ಪಾಲಿಟೆಕ್ನಿಕಲ್ ಕಾಲೇಜಿನ ಪ್ರಿನ್ಸಿಪಾಲ್ ವೆಂಕಟೇಶ್ ಮೂರ್ತಿ, ಜಿಟಿಟಿಸಿ ಕಾಲೇಜಿನ ಪ್ರಿನ್ಸಿಪಾಲ್ ಮೌನೇಶ್, ಐಟಿಐ ಕಾಲೇಜಿನ ಪ್ರಿನ್ಸಿಪಾಲ್ ಸಂಗನಗೌಡ ಮಾಲಿ ಪಾಟೀಲ್, ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶಿವಣ್ಣ ಕೋಣಂಗಿ ಸರ್ ಹಾಗೂ ಮಹೇಶ್ ಗಂಗಾವತಿ ಸರ್ ಅವರುಗಳೂ ಅಭಿನಂದನೆಗಳನ್ನು ತಿಳಿಸಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಂಕರಪ್ಪ ಚಾಗಿ ಅವರ ಈ ಸಾಧನೆ ಯುವ ಸರ್ಕಾರಿ ನೌಕರರಿಗೆ ಪ್ರೇರಣೆಯಾಗಿದ್ದು, ಅವರ ಮುಂದಿನ ಸೇವಾ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಲವರು ಶುಭ ಹಾರೈಸಿದರು.
