ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಸಂಸ್ಕಾರದ ಶಿಕ್ಷಣ ಅಗತ್ಯ: ಮಲ್ಲಿಕಾರ್ಜುನ ಚೌಕಿಮಠ.

ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಸಂಸ್ಕಾರದ ಶಿಕ್ಷಣ ಅಗತ್ಯ: ಮಲ್ಲಿಕಾರ್ಜುನ ಚೌಕಿಮಠ.
ಕೊಪ್ಪಳ: ತಾಲೂಕಿನ ಬೂದಗುಂಪಾ ಗ್ರಾಮದ ಶ್ರೀ ಕರಿಯಮ್ಮ ದೇವಿ ಗ್ರಾಮೀಣಾವೃದ್ಧಿ ಶಿಕ್ಷಣ ಸಂಸ್ಥೆಯ ಡಾ. ರಾಧಾಕೃಷ್ಣನ್ ಪಬ್ಲಿಕ್ ಸ್ಕೂಲ್ 8ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಚೌಕಿಮಠ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಈ ಶಿಕ್ಷಣ ಸಂಸ್ಥೆಯು ನೀಡುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ.ಮಕ್ಕಳ ಪ್ರತಿಭೆಗೆ ಶಾಲಾ ವಾರ್ಷಿಕೋತ್ಸವ ಸಮಾರಂಭವು ಸೂಕ್ತ ವೇದಿಕೆಯಾಗಲಿದೆ ಎಂದರು.
ಆಟೋಟಗಳಲ್ಲಿ ವಿಜೇತರಾದ ಪಾಲಕರಿಗೆ ಮತ್ತು ಮಕ್ಕಳಿಗೆ ಸನ್ಮಾನಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕರಾದ ಕೆ.ಮಧುಸೂದನ್ ಡೊಳ್ಳಿನ ವಹಿಸಿಕೊಂಡಿದ್ದರು.ಇದೇ ವೇಳೆ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಸವರಾಜ ಬಾವಿಕಟ್ಟಿ, ಮುಖಂಡರಾದ ಎ.ವಿ.ಗುರುರಾಜ್ ರಮೇಶ್ ಕೆ,ಮಂಜುನಾಥ ಚನ್ನದಾಸರ್, ರಾಮಣ್ಣ ದೊಡ್ಮನಿ, ಯಮನೂರಪ್ಪ ದೊಡ್ಮನಿ, ಹುಲುಗಪ್ಪ ಭಜಂತ್ರಿ, ಮಂಜುನಾಥ್ ದೊಡ್ಮನಿ ಒಣಬಳ್ಳಾರಿ ಹಾಗೂ ಶಿಕ್ಷಣ ಪ್ರೇಮಿಗಳು ಪಾಲಕರು ಮಕ್ಕಳು ಉಪಸ್ಥಿತಿ ಇದ್ದರು.




