news

ಕಿನ್ನಾಳ : ಅದ್ಧೂರಿಯಾಗಿ ನೆಡೆದ ಶ್ರೀ ನೀಲಕಂಟೇಶ್ವರ ರಥೋತ್ಸವ…

ಕಿನ್ನಾಳ : ಅದ್ಧೂರಿಯಾಗಿ ನೆಡೆದ ಶ್ರೀ ನೀಲಕಂಟೇಶ್ವರ ರಥೋತ್ಸವ…

ಕೊಪ್ಪಳ :  ​ತಾಲೂಕಿನ ಕಿನ್ನಾಳ ಗ್ರಾಮದ ಶ್ರೀ ನೀಲಕಂಟೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

​ಜಾತ್ರೆಯ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಶ್ರೀ ನೀಲಕಂಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಕಲ ವಾದ್ಯಗೋಷ್ಠಿಗಳೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ವಿಜೃಂಬಣೆಯಿಂದ ನೆರವೇರಿದ ರಥೋತ್ಸವ :
​ಸಾಯಂಕಾಲ ನಿಗದಿತ ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ಸಾಗುವ ಹಾದಿಯುದ್ದಕ್ಕೂ ಭಕ್ತರು ಉತ್ತತ್ತಿ, ಬಾಳೆಹಣ್ಣು ಹಾಗೂ ಹೂವುಗಳನ್ನು ರಥಕ್ಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಕಿನ್ನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಅತ್ಯಂತ ಸಡಗರ ಸಂಭ್ರಮದಿಂದ ರಥೋತ್ಸವ ನೆರವೇರಿತು.

Related Articles

Leave a Reply

Your email address will not be published. Required fields are marked *

Back to top button