ಕೊಪ್ಪಳ ಸುದ್ದಿ

ಸ್ಪಿರಿಟ್‌ ಕುಡಿದ ಪರಿಣಾಮ ಇಬ್ಬರು ಯುವಕರು ಸಾವು…

ಸ್ಪಿರಿಟ್‌ ಕುಡಿದ ಪರಿಣಾಮ ಇಬ್ಬರು ಯುವಕರು ಸಾವು...

 

ಸ್ಪಿರಿಟ್‌ ಕುಡಿದ ಪರಿಣಾಮ ಇಬ್ಬರು ಯುವಕರು ಸಾವು…

ಕೊಪ್ಪಳ: ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಸೀಮೆಯಲ್ಲಿರುವ ಶಾನುಭೋಗರ ಹೊಲದಲ್ಲಿ ಸರಾಯಿ,ಸ್ಪಿರಿಟ್‌ ಕುಡಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ, ಇನ್ನೊಬ್ಬ ಯುವಕರು ಜೀವನ್ಮರಣದ ನಡುವೆ ಹೋರಾಟ ನಡೆಸಿ ಸಾವನ್ನಪ್ಪಿದ್ದಾರೆ.
ನಾಲ್ಕೈದು ಜನ ಯುವಕರು ಸೇರಿ ಫೆ. 4ರಂದು ಸ್ಪಿರಿಟ್‌ ಕುಡಿದಿದ್ದು, ಅದರಲ್ಲಿ ಅಮರಯ್ಯ ಹಿರೇಮಠ (35) ಹಾಗೂ ರಮೇಶ್‌ ಹೊಸಹಳ್ಳಿ (25) ವರ್ಷದ ಯುವಕರು ಮೃತಪಟ್ಟಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ 33 ವರ್ಷದ ಶರಣಪ್ಪ ಹಂಚಿನಾಳ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಮೇಶ ತಂದೆ ಯಮನಪ್ಪ ಹೊಸಳ್ಳಿ ಮುನಿರಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ‘ರಮೇಶ, ಅಮರಯ್ಯ ಹಿರೇಮಠ, ಶರಣಪ್ಪ ಹಂಚಿನಾಳ ಹಾಗೂ ಶರಣಪ್ಪ ಗುರಿಕಾರ ನಾಲ್ಕು ಜನ ಸೇರಿಕೊಂಡು ಕುಡಿದು ಅಸ್ವಸ್ಥರಾಗಿದ್ದಾರೆ. ಸ್ಪಿರಿಟ್ಕುಡಿಯಲು ಯೋಗ್ಯವಲ್ಲ ಎಂದು ಗೊತ್ತಿದ್ದರೂ ಟ್ಯಾಂಕರ್‌ ಲಾರಿಯಿಂದ ಸ್ಪಿರಿಟ್‌ ತಂದುಕೊಟ್ಟ ಮಾರುತಿ ಬಂಡಿ, ಶರಣಪ್ಪ ಗುರಿಕಾರ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮ ವಹಿಸಬೇಕು’ಎಂದು ಸಾವನ್ನಪ್ಪಿದ ಕುಟುಂಬಸ್ಥರು ಅಗ್ರಹಿಸಿದ್ದಾರೆ.ಸ್ಪಿರಿಟ್ ಯಾರು ಕೊಟ್ಟರು ಎಂಬ ವಿಷಯ ಪೊಲೀಸ್ ತನಿಖೆಯಿಂದ್ ತಿಳಿಯಬೇಕಿದೆ.

Related Articles

Leave a Reply

Your email address will not be published. Required fields are marked *

Back to top button