news

ಕಿನ್ನಾಳದಲ್ಲಿ ಉತ್ಸಾಹದ ಹೋಳಿ ಆಚರಣೆ : ರಂಗಿನಲ್ಲಿ ಮಿಂದೆದ್ದ ಯುವಕರು, ಮಕ್ಕಳು

ಕಿನ್ನಾಳದಲ್ಲಿ ಉತ್ಸಾಹದ ಹೋಳಿ ಆಚರಣೆ : ರಂಗಿನಲ್ಲಿ ಮಿಂದೆದ್ದ ಯುವಕರು, ಮಕ್ಕಳು

ವರದಿ. ಎಂ ಏನ್ ಕುಂದಗೋಳ

ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಅಧುರಿಯಾಗಿ ಹೋಳಿ ಆಚರಣೆ ಮಾಡಲಾಯಿತು. ಅದರಲ್ಲಿ ವಿಶೇಷವಾಗಿ ಯುವಕರು, ಮಕ್ಕಳು, ವೃದ್ಧರು, ಮಹಿಳೆಯರು,ಬಣ್ಣದಲ್ಲಿ ಮಿಂದೆದ್ದರು,ಆದರೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಹಬ್ಬಗಳಲ್ಲಿ ಹೋಳಿ ಹಬ್ಬಕ್ಕೆ ಒಂದು ವಿಷೇಶ ಆಚರಣೆ ಇದೆ.

ಅದರಲ್ಲೂ ಉತ್ತರ ಕರ್ನಾಟಕದ ಕೆಲವೊಂದಷ್ಟು ಭಾಗಗಳಲ್ಲಿ ಈ ಹೋಳಿ ಆಚರಣೆಯನ್ನು ಮಾಡದೇ, ಯುಗಾದಿ ಹಾಗೂ ಹನುಮನ ಓಕಳಿ, ಹನುಮ ಜಯಂತಿಯಂದು, ಬಣ್ಣವನ್ನು ಪರಸ್ಪರ ಹಚ್ಚಿ ಸಂತೋಷವಾಗಿ ರಂಗಿನ ಹಬ್ಬ ಆಚರಣೆ ಮಾಡುತ್ತಾರೆ.

ಆದರೆ ಕೊಪ್ಪಳ, ಕುಕನೂರು, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕಾರಟಗಿಗಳಲ್ಲಿ ಈ ರಂಗಿನ ಹಬ್ಬ ಹೋಳಿಯನ್ನು ಮಹಿಳೆಯರು, ಮಕ್ಕಳು ವಿಷೇಶವಾಗಿ ವೃದ್ದರು ರಂಗನ್ನು ಎರಚಿ ಸಂತೋಷ, ಉತ್ಸಾಹದಿಂದಆಚರಣೆ ಮಾಡಿದರು.

ಹಿಂದೆ ಹೋಳಿ ಹಬ್ಬ ಬಂತೆಂದರೇ ಸಾಕು ಶಾಲಾ ವಿದ್ಯಾರ್ಥಿಗಳು, ಯುವ ಪಡೆ ತಂಡೊಪ ತಂಡವಾಗಿ ಕೈಯಲ್ಲಿ ಬಣ್ಣ ಹಿಡಿದು, ಸ್ನೇಹಿತರನ್ನು ತಡಕಾಡಿ ಮನೆ ಹೊಕ್ಕು ಬಣ್ಣ ಹಚ್ಚಿ ಸಂಭ್ರಮ ಪಡುತ್ತಿದ್ದರು. ಕಾಲ ಕ್ರಮೇಣ ಇಂತಹ ಸೊಗಡಿನ ಹಬ್ಬಗಳು ಕಡಿಮೆಯಾಗುತ್ತಿವೆ.

ಹಬ್ಬದಂದು ಹಚ್ಚಿದ ಬಣ್ಣ ತಿಂಗಳವಾದರು ಮುಖದ ರಂಗು ಹೋಗದಂತೆ ಇರುತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಕೃತಕ ಬಣ್ಣಗಳು ಹಾನಿಕಾರಕ ಮತ್ತು ವಿಷಕಾರಿಯೂ ಆಗಿವೆ. ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಬಣ್ಣ ಮಾರುಕಟ್ಟೆಗೆ ಬರುತ್ತಿಲ್ಲಾ, ರಂಗಿನಲ್ಲಿ ಹಲವಾರು ರಾಸಾಯನಿಕ ಬೆರೆಸುವದರಿಂದ ಮುಖಕ್ಕೆ, ದೇಹಕ್ಕೆ ಹಾನಿಕಾರವಾಗುತ್ತಿವೆ.  ಆದ್ದರಿಂದ ಬಣ್ಣದ ಸೊಗಡು ಕಡಿಮೆಯಾಗುತ್ತಿದೆ.

ಹೋಳಿಯ ಒಂದು ಪ್ರಮುಖ ಭಾಗವೆಂದರೆ ಅಗ್ನಿ ಪೂಜೆಯೂ ಸಹ, ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ವಾಸನಗಳನ್ನು ಅಗ್ನಿಗೆ ಅರ್ಪಿಸುತ್ತೇವೆ, ಇದರಿಂದಾಗಿ ಅವರು ಅಂತಿಮವಾಗಿ ಅವರನ್ನು ಶಾಂತಗೊಳಿಸಬಹುದು. ಹೋಳಿಯ ಸಮಯದಲ್ಲಿ ಬೆಂಕಿಯನ್ನು ಪೂಜಿಸುವುದರಿಂದ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬೆಚ್ಚಗಿನ ಋತುವು ಬರುತ್ತದೆ, ಇದು ಚಳಿಗಾಲದ ಅಂತ್ಯ ಮತ್ತು ಮುಂಬರುವ ವಸಂತಕಾಲದ ಸುಗ್ಗಿಯ ಋತುವಿನ ಸಮೃದ್ಧಿಯನ್ನು ಸೂಚಿಸುತ್ತದೆ. ಹೋಳಿಯ ಬಣ್ಣಗಳು ನಮ್ಮ ಸಂತೋಷದಾಯಕ ಭಾವನೆಗಳು ಮತ್ತು ಆಸೆಗಳನ್ನು ಈಗ ಮುಕ್ತವಾಗಿ ವ್ಯಕ್ತಪಡಿಸುತ್ತವೆ. ಹಳೆಯ ದಿನಗಳಲ್ಲಿ ಬಳಸಲಾಗುತ್ತಿದ್ದ ಬಣ್ಣಗಳು ನೈಸರ್ಗಿಕ ಮತ್ತು ಸಾವಯವವಾಗಿದ್ದವು, ಆದ್ದರಿಂದ ದೇಹಕ್ಕೆ ಆರೋಗ್ಯಕರವಾಗಿರುವುದರ ಜೊತೆಗೆ ನಮ್ಮ ಮನಸ್ಸನ್ನು ಗುಣಪಡಿಸುವ ದ್ವಂದ್ವ ಉದ್ದೇಶವನ್ನು ಪೂರೈಸುತ್ತವೆ.

ಒಟ್ಟಾರೇ ಈ ಹೋಳಿ ಹುಣ್ಣಿಮೆಯ ರಂಗಿನಾಟಕ್ಕೆ ಕಾರಣವಂತು ಇರಲೇ ಬೇಕು ಅಲ್ಲವೇ ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.

ಹೋಳಿ ಹಬ್ಬವು ಸ್ವಾರ್ಥ, ದುರಾಸೆ, ಕಾಮ, ದ್ವೇಷ ಮತ್ತು ಇತರ ಎಲ್ಲಾ ನಕಾರಾತ್ಮಕ ಪ್ರವೃತ್ತಿಗಳು ಮತ್ತು ಕ್ರಿಯೆಗಳನ್ನು ಸುಡುವುದನ್ನು ಮತ್ತು ರಾಕ್ಷಸ ಶಕ್ತಿಗಳ ಮೇಲೆ ನೀತಿವಂತ ಶಕ್ತಿಗಳ ವಿಜಯವನ್ನು ಸೂಚಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button