Uncategorized

ಸಚಿವ ಶಿವರಾಜ್ ತಂಗಡಗಿ ಮಾತೋಶ್ರೀ ಹುಲಿಗೆಮ್ಮ ಅವರಿಂದ ಶಾಲೆಗೆ ಭೂ ದಾನ

ಅಂದು ಕುಣಿಕೇರಿ ಹುಚ್ಚಮ್ಮ ಇಂದು ಕಾರಟಗಿ ಹುಲಿಗೆಮ್ಮ ಶಿಕ್ಷಣಕ್ಕೆ ಭೂ ದಾನ ಮಾದರಿ

ಕಾರಟಗಿ : ಶಾಲಾ ಶೈಕ್ಷಣಿಕ ಅಭಿವೃದ್ಧಿಗಾಗಿ 01 ಎಕರೆ ಜಮೀನು ದಾನ ಮಾಡುವ ಮೂಲಕ ಮಕ್ಕಳ ಉನ್ನತ ಶಿಕ್ಷಣ, ಕ್ರೀಡಾ ಮೈದಾನ ಮತ್ತು ಮೂಲಸೌಕರ್ಯಗಳ ವಿಸ್ತರಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಸಚಿವರಾದ ಶಿವರಾಜ ತಂಗಡಗಿ ಅವರ ತಾಯಿಯಾದ ಹುಲಿಗೆಮ್ಮ ಇವರು

ನವಲಿ ಹೋಬಳಿಯ ಆದಪುರ ಗ್ರಾಮದ ಸರ್ವೆ ನಂಬರ್ 86/1/9ರಲ್ಲಿ 01 ಎಕರೆಯ ವಿಸ್ತೀರ್ಣ ಭೂಮಿಯನ್ನು ಖರೀದಿಸಿ ದಾನವಾಗಿ ನೀಡಿದ್ದಾರೆ
ಕನಕಗಿರಿ ವಿಧಾನ ಸಭಾ ಕ್ಷೇತ್ರದ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ lಮಕ್ಕಳ ಶಾಲಾ ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶಾಲಾ ಕೊಠಡಿಗಳು, ಕ್ರೀಡಾಂಗಣ, ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ. ಶಿಕ್ಷಣ ಉದ್ದೇಶಕ್ಕಾಗಿ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿರುವುದು, ಬಹು ದೊಡ್ಡ ಕೊಡುಗೆಯಾಗಿದೆ. ದಾನವಾಗಿ ನೀಡಿದ ಜಮೀನನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕೃತವಾಗಿ ಶ್ರೀಮಾನ್ಯ ರಾಜ್ಯಪಾಲರ ಕರ್ನಾಟಕ ಸರ್ಕಾರದ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿ ಭೂ ಪರಿವರ್ತನೆ ಮತ್ತು ಕಾನೂನುಬದ್ಧ ದಾಖಲೆಗಳ ಮುಖಾಂತರ ಜನವರಿ 31ರಂದು ನೋಂದಾಯಿಸಲಾಯಿತು,

ಸಚಿವರ ಮಾತೋಶ್ರೀಯವರ ಮಹತ್ವ ದಾನಕ್ಕೆ ಕ್ಷೇತ್ರ ಶಿಕ್ಷಣ ಸುಧಾರಣಾ ಸಮಿತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಅಧ್ಯಕ್ಷರಾದ ಶರಣಯ್ಯ ಸ್ವಾಮಿ ಬೇವಿನಾಳರವರು ಮಾತನಾಡಿ
ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತವಾಗಬಾರದು ಎನ್ನುವ ಉದ್ದೇಶದಿಂದ ಮಾತೃಶ್ರೀ ಶಾರದಾಂಬೆ ಸ್ವರೂಪಿಯಾಗಿ ಹುಲಿಗೆಮ್ಮ ಗಂಡ ಸಂಗಪ್ಪ ತಂಗಡಗಿ ಯವರು ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲು ಸಹಕಾರಿಯಾಗಿದೆ. ಮತ್ತು ಸಚಿವ ಶಿವರಾಜ್ ತಂಗಡಗಿಯವರಿಗೆ ಶಿಕ್ಷಣದ ಬಗ್ಗೆ ಇರುವ ಪ್ರೀತಿ ವಾತ್ಸಲ್ಯ ದೊಂದಿಗೆ ಶಿಕ್ಷಣಕ್ಕಾಗಿ ಸರ್ಕಾರಿ ಶಾಲಾ ಕಾಲೇಜುಗಳ ಶ್ರೇಯೋಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ನೀಡಿದ್ದಾರೆ. ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ಸಚಿವ ಶಿವರಾಜ್ ತಂಗಡಗಿಯವರ ಕೊಡುಗೆ ಸದಾ ಇರಲಿ ಎಂದು ಕ್ಷೇತ್ರ ಶಿಕ್ಷಣ ಸುಧಾರಣಾ ಸಮಿತಿಯಿಂದ ಧನ್ಯವಾದಗಳು ತಿಳಿಸುವ ಮೂಲಕ ಅಭಿನಂದನೆ ಸಲ್ಲಿಸಿ ಅಭಿನಂದಿಸಿದರು

ನಂತರ ಕ್ಷೇತ್ರ ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯರಾದ ಬಸವರಾಜ್ ಹಾಲ ಸಮುದ್ರ ಮಾತನಾಡಿ ವಿಧಾನಸಭಾ ಕ್ಷೇತ್ರದ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಪುರ ಗ್ರಾಮದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಒಂದು ಎಕರೆ ಜಮೀನನ್ನು ಮಾತೃ ಸ್ವರೂಪಿ ಶಾರದಾಂಬೇ ಸ್ವರೂಪಿಯಾದ ಹುಲಿಗೆಮ್ಮ ಗಂಡ ಸಂಗಪ್ಪ ತಂಗಡಿಗೆ ಅವರ ಹೆಸರಿನೊಂದಿಗೆ ಖರೀದಿಸಿ ಮಾನ್ಯ ರಾಜ್ಯಪಾಲರ ಮುಖಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೊಂದಾಯಿಸಿ ಸಾವಿರಾರು ಮಕ್ಕಳ ಭವಿಷ್ಯತ್ ಅನ್ನು ರೂಪಿಸುವಲ್ಲಿ ಕಾರಣಿ ಭೂತರಾಗಿದ್ದಾರೆ. ಕ್ಷೇತ್ರದಲ್ಲಿ ಬರುವಂತಹ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸಲಿ. ಎಂದು ಕ್ಷೇತ್ರ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರ ಪದಾಧಿಕಾರಿಗಳ ಪರವಾಗಿ ಅವರಿಗೆ ಕೋಟಿ ಕೋಟಿ ವಂದನೆ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದು ಹೇಳಿದರು,

ಭೂ ದಾನ ಕಾರ್ಯಕ್ಕೆಆದಪುರ ಜನರಿಂದ ಕ್ಷೇತ್ರದ ಜನರು ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ಕಾರಟಗಿ ಮತ್ತು ಕನಕಗಿರಿಯ ಜಂಟಿ ತಾಲೂಕುಗಳ ಕ್ಷೇತ್ರ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಮತ್ತು ನಾಮ ನಿರ್ದೇಶಕರು, ಸದಸ್ಯರುಗಳು ಮತ್ತು ಸರ್ವ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.

D-newskannada

Siddu Hiremath

ಇದು ಒಂದು ಸುದ್ದಿ ಹಾಗೂ ಮನೋರಂಜನೆ ನೀಡುವ ಡಿಜಿಟಲ್ ವಾಹಿನಿ ಆಗಿದೆ

Related Articles

Leave a Reply

Your email address will not be published. Required fields are marked *

Back to top button