ಕೊಪ್ಪಳ ಸುದ್ದಿ

ಕೊಪ್ಪಳ  ನಗರದ ರಾಜಕಾಲುವೆ ಮುಂಗಾರು ಮಳೆಗೂ ಮುನ್ನ ಸ್ವಚ್ಛಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ.

ಕೊಪ್ಪಳ  ನಗರದ ರಾಜಕಾಲುವೆ ಮುಂಗಾರು ಮಳೆಗೂ ಮುನ್ನ ಸ್ವಚ್ಛಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ.

ಕೊಪ್ಪಳ : ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಸೋಮವಾರ ಮನವಿ ಸಲ್ಲಿಸಿ ಮಳೆ ನೀರಿನಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.

ಮನವಿಯಲ್ಲಿ ಕೊಪ್ಪಳ ನಗರದ ಪ್ರಮುಖ ಬಡಾವಣೆಗಳಿಂದ ಹಾದುಹೋಗಿರುವ ಮುಖ್ಯ ರಾಜಕಾಲುವೆ ಪ್ರಸ್ತುತ ಗಿಡಗಂಟಿಗಳಿಂದ.ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮತ್ತು ಹೂಳು ತುಂಬಿ ಅಲ್ಲಲ್ಲಿ ಸಂಪೂರ್ಣವಾಗಿ ಮುಚ್ಚಿ ನೀರು ಹರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆ ರಾಜಕಾಲುವೆ ಆಕ್ರಮಿಸಿಕೊಂಡು ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟಲಾಗಿದೆ. ಈ ಮುಂಚೆ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದ್ದು.ಆದರೂ ಇದುವರೆಗೆ ಕಾಲುವೆಯನ್ನು ಆಕ್ರಮಿಸಿಕೊಂಡಿರುವ ಕಟ್ಟಡಗಳನ್ನು ತೆರೆವು ಗೊಳಿಸಿರುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ನೀರಿನ ಹರಿವಿಗೆ ಅಡ್ಡಿ ಉಂಟಾಗಿ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಅತಿ ಶೀಘ್ರದಲ್ಲೇ ಮುಂಗಾರು ಮಳೆ ಪ್ರಾರಂಭವಾಗಲಿದೆ. ನಗರ ಸಭೆಯಲ್ಲಿ ಈ ಹಿಂದೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ದಿನಾಂಕ 31/01/2026 ರಂದು ರಾಜ್ ಕಾಲುವೆ ಸ್ವಚ್ಚ ಗೊಳಿಸಲು ಮತ್ತು ನವೀಕರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು.ಆದರೂ ಇನ್ನೂ ವರೆಗೂ ಯಾವ ಕ್ರಮ ಕೈಗೊಳ್ಳಲಿಲ್ಲ. ತಾವು ಗಂಭೀರವಾಗಿ ಪರಿಗಣಿಸಿ ರಾಜಕಾಲುವೆ ಸ್ಥಳ ವೀಕ್ಷಿಸಿ ತಕ್ಷಣ ಅಕ್ರಮಗೊಂಡ ಜಾಗಗಳನ್ನು ತೆರವುಗೊಳಿಸಿ. ಸ್ವಚ್ಚತೆಗೆ ಕ್ರಮ ಕೈಗೊಳ್ಳಲು ಆದೇಶಿಸಲು ಕೋರುತ್ತೇವೆ.

ಪ್ರತಿ ವರ್ಷದಂತೆ ಈ ಬಾರಿಯೂ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದಿದ್ದರೆ, ಈ ಕೆಳಗಿನ ಸಮಸ್ಯೆಗಳು ಎದುರಾಗುವ ಭೀತಿ ಇದೆ:

ನಗರ ಪ್ರದೇಶದಲ್ಲಿ ಕೃತಕ ಪ್ರವಾಹ ಸೃಷ್ಟಿ: ರಾಜಕಾಲುವೆ ಗಿಡಗಂಟಿಗಳಿಂದ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕೊಡಿದ್ದು. ಮಳೆ ನೀರು ರಸ್ತೆಯ ಮೇಲೆ ಹರಿದು ಕೃತಕ ಪ್ರವಾಹ ಸೃಷ್ಟಿಯಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಹಿಂದೆ ಕೆಲವು ಬಾರಿ ಮಳೆ ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಅದೆಷ್ಟು ಕುಟುಂಬಗಳು ತೊಂದ್ರೆಗಳನ್ನು ಅನುಭವಿಸಿದ್ದು ಸುದ್ದಿಯಾಗಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು: ರಾಜ್ ಕಾಲುವೆ ಪಕ್ಕದಲ್ಲಿರುವ ಮನೆಗಳಿಗೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗುವ ಸಂಭವವಿದೆ.

ಆರೋಗ್ಯ ಸಮಸ್ಯೆ: ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು (ಡೆಂಗ್ಯೂ, ಮಲೇರಿಯಾ) ಹರಡುವ ಸಾಧ್ಯತೆ ಹೆಚ್ಚಿದೆ.

ನಮ್ಮ ವಿನಂತಿ:ಮುನ್ನೆಚ್ಚರಿಕಾ ಕ್ರಮವಾಗಿ, ಮಳೆಗಾಲ ಆರಂಭವಾಗುವ ಮೊದಲೇ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ, ತುರ್ತಾಗಿ ಜೆ.ಸಿ.ಬಿ ಮೂಲಕ ರಾಜಕಾಲುವೆಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ,ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಆಡಳಿತವೇ ಹೊಣೆ ಹೊತ್ತು ಸಾರ್ವಜನಿಕರಿಗೆ ಆಗುವ ನಷ್ಟ ಭರಿಸಬೇಕಾಗುತ್ತದೆ.ತಮ್ಮ ಶೀಘ್ರ ಕ್ರಮವು ನಗರದ ನಾಗರಿಕರ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದು ನಂಬಿದ್ದೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್.ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು.ದಲಿತ ಯುವ ವೇದಿಕೆಯ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ. ಮುಖಂಡ ಶಿವಪ್ಪ ಹಡಪದ್ ಮುಂತಾದವರು ಮನವಿ ಮೂಲಕ ಕೋರಿದರು.

Related Articles

Leave a Reply

Your email address will not be published. Required fields are marked *

Back to top button