Uncategorized

ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡ ನೃತ್ಯ ಪ್ರದರ್ಶನಕ್ಕೆ ಆಯ್ಕೆ

ರಾಯಚೂರ ಜಿಲ್ಲಾ ಉತ್ಸವ ೨೦೨೬ ಉತ್ಸವಕ್ಕೆ ಕ್ಷಣ ಗಣನೆ…

ಕೊಪ್ಪಳ : ೦೩, ಕಲ್ಯಾಣ ಕರ್ನಾಟಕದ ಐತಿಹಾಸಿಕ ಎಡದೊರೆ ನಾಡಿನ ರಾಯಚೂರು ಜಿಲ್ಲಾ ಉತ್ಸವವು ೨೦೨೬ ಫೆಬ್ರುವರಿ ೫  ೬ ಮತ್ತು ೭ರಂದು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ನಡೆಯುವ ರಾಯಚೂರ್ ಉತ್ಸವದಲ್ಲಿ ಮಹೇಶ್ ಬಾಬು ಸುರ್ವೆ ನೇತೃತ್ವದ ಕೂಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡವು ನೃತ್ಯ  ಪ್ರದರ್ಶನಕ್ಕೆ ಆಯ್ಕೆಯಾಗಿದ್ಧು ಸುಮಾರು ೨೦ಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ವಿಶಿಷ್ಟ ನೃತ್ಯ ಪ್ರದರ್ಶನವನ್ನು ಮುಖ್ಯ ವೇದಿಕೆ ಶ್ರೀ ಬಸವೇಶ್ವರ ಅಡಿಟೂರಿಯಂ ಸಭಾಂಗಣದಲ್ಲಿ ಫೆಬ್ರವರಿ ೭ರಂದು ೩.೩೦ ರಿಂದ ೪:೪೦ ರವರೆಗೆ  ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. 

   ಮಹೇಶ್ ಬಾಬು ಸುರ್ವೆ ನೇತೃತ್ವ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಈಗಾಗಲೇ ಎರಡು ಬಾರಿ ಹಂಪಿ ಉತ್ಸವ ಎರಡು ಬಾರಿ ಕನಕಗಿರಿ ಉತ್ಸವ. ೩ ಬಾರಿ ಆನೆಗುಂದಿ ಉತ್ಸವ. ಎರಡು ಬಾರಿ ಮೈಸೂರ್ ದಸರಾ ೨೦೧೦ ರಿಂದಲೂ ನಿರಂತರವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನ. ಕಿತ್ತೂರು ಉತ್ಸವ ಇಟಗಿ ಉತ್ಸವ. ಗೋವಾ ಕನ್ನಡಿಗರ ಸಮ್ಮೇಳನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ.  ಇಲಾಖೆಯ ವನಕೆ ಓಬವ್ವನ ಜಯಂತಿ. ಕೊಪ್ಪಳ ಜಿಲ್ಲಾ ಉತ್ಸವ. ಮಂತ್ರಾಲಯದಲ್ಲಿ ಕನ್ನಡಿಗರ ಸಮ್ಮೇಳನ. ಕಲ್ಯಾಣ ಕರ್ನಾಟಕ ಉತ್ಸವ. ಕಾಶಿ ಕನ್ನಡ ಸಮ್ಮೇಳನ ಅಲ್ಲದೆ ೨೦೦೫ರ ಮೈಸೂರು ದಸರಾ ಮಹೋತ್ಸವ. ಇನ್ನೂ ಮುಂತಾದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ಕಳೆದ ಎರಡು ದಶಕಗಳಿಂದಲೂ ನೀಡುತ್ತಾ ಬಂದಿದೆ. 

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯನ್ನು ನಿರಂತರವಾಗಿ ಅನೇಕ ಉತ್ಸವಗಳಲ್ಲಿ ಪ್ರತಿನಿಧಿಸುತ್ತಾ ಬಂದಿರುವ ಮಹೇಶ್ ಬಾಬು ಸುರ್ವೆ ಅವರ ಸಾಂಸ್ಕೃತಿಕ ಲೋಕದ ಪಯಣದ ಹೆಜ್ಜೆಯಲ್ಲಿ ಇದು ಒಂದು ಎಂಬ ಹೆಗ್ಗಳಿಕೆ. ಹೆಚ್ಚಿನ ಮಾಹಿತಿಗಾಗಿ : ೯೮೪೫೩೩೮೧೬೦

Related Articles

Leave a Reply

Your email address will not be published. Required fields are marked *

Back to top button