ಭಾರತೀಯ ಪ್ರಜಾ ಸೇನೆ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಪದಾಧಿಕಾರಿಗಳ ಆಯ್ಕೆ,,

ಗಂಗಾವತಿ : ಇಂದು ನಗರದ ನೀರಿಕ್ಷಣಾ ಮಂದಿರದಲ್ಲಿ ಭಾರತೀಯ ಪ್ರಜಾ ಸೇನಾ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗಂಗಾವತಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಸಂಸ್ಥಾಪಕಾಧ್ಯಕ್ಷ ಮಂಜುನಾಥ ಮಾತನಾಡಿ ಬಡ, ದೀನ, ದಲಿತರ ಶೋಷಿತರ,ಅನ್ಯಾಯಕ್ಕೆ ಒಳಗಾದವರಿಗೆ
ಸಾಮಾಜಿಕ ಹೋರಾಟಗಳ ಮೂಲಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು.
ಪದಾಧಿಕಾರಿಗಳ ಆಯ್ಕೆ ವೇಳೆ ಸಂಸ್ಥಾಪಕ ಮಂಜುನಾಥ್ ಆರ್ ರಾಜ್ಯಧ್ಯಕ್ಷ ಹಾಗೂ ಟಿ, ವೇಣು ಗೋಪಾಲ್ ಅವರ ಆದೇಶದ ಮೇರೆಗೆ ಪಂಪಾಪತಿ ಸಿದ್ದಾಪುರ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ರಾಜ್ಯ ಸಮಿತಿ ಸದಸ್ಯರು ತಿಮ್ಮಣ್ಣ ಹಂಚಿನಾಳ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಮರಿಯಪ್ಪ ಎಮ್. ಡಿ ಹೊಸಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ನರಸಿಂಹ ಹಿರೇ ಜಂತಕಲ್, ಕನಕಗಿರಿ ತಾಲೂಕು ಅಧ್ಯಕ್ಷರಾಗಿ ನಿಂಗಪ್ಪ ರಾಂಪುರ ಇನ್ನೂ ಮುಂತಾದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



