
ಅಭಿವೃದ್ಧಿಗೆ ಮತದಾರರ ಒಲವು
ಫಲಿತಾಂಶಕ್ಕೆ ವೀರೇಶ ಮಹಾಂತಯ್ಯನಮಠ ಸಂತಸ
ಕೊಪ್ಪಳ: ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಎನ್ ಡಿಎಗೆ ಬೆಂಬಲಿಸುವ ಮೂಲಕ ಮತದಾರರು, ಅಭಿವೃದ್ಧಿ ರಾಜಕಾರಣಕ್ಕೆ ಬೆಂಬಲಿಸಿರುವುದು ಸಂತಸ ತಂದಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪುದುಚೇರಿ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯಲ್ಲಿ ಎನ್ ಡಿಎ ಬಹುಮತ ಗಳಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಅದರಲ್ಲಿಯೂ ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿರುವ ಟಿಎಂಸಿ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬೇಸತ್ತಿದ್ದ ಅಲ್ಲಿನ ಮತದಾರರು, ಕೊನೆಗೆ ಎನ್ ಡಿಎ ಪಕ್ಷ ಬೆಂಬಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.ದೇಶದ ಇತಿಹಾಸದ ಚುನಾವಣೆಯಲ್ಲಿಯೇ ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಸಂಕಲ್ಪಗಳು,ದೇಶದ ಭದ್ರತೆಯ ವಿಚಾರವನ್ನಿಟ್ಟುಕೊಂಡು ಪಶ್ಚಿಮ ಬಂಗಾಳದ ಮತದಾರರು ಕೊನೆಗೆ ತಮ್ಮ ನಿಲುವು ಬದಲಿಸಿದ್ದಾರೆ.
ಇನ್ನೂ ಅಸ್ಸಾಂನಲ್ಲಿ ಸತತ ಮೂರನೇ ಬಾರಿ ಎನ್ ಡಿಎಗೆ ಬಹುಮತ ದೊರತಿದೆ. ಪುದುಚೇರಿಯಲ್ಲಿ ಜನರು ಎನ್ ಡಿಎ ಗೆ ಅವಕಾಶ ನೀಡಿದ್ದಾರೆ.
ಕೇರಳ, ತಮಿಳುನಾಡಿನಲ್ಲಿಯೂ ಎನ್ ಡಿಎ ಉತ್ತಮ ಸ್ಪರ್ಧೆಯೊಡ್ಡಿದ್ದು, ಮುಂದಿನ ಚುನಾವಣೆಗಳಲ್ಲಿ ಇಲ್ಲಿಯೂ ಬಹುಮತ ಗಳಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡುವ ವಿಶ್ವಾಸವಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

