Breking news

* ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳಕ್ಕೆ ಮೊದಲನೇ ಸ್ಥಾನ

ಹಿಂದಿನ ವರ್ಷ 23‌ನೇ ಸ್ಥಾನದಲ್ಲಿದ್ದ ಕೊಪ್ಪಳಕ್ಕೆ ಈ ಬಾರಿ 17ನೇ ಸ್ಥಾನದ ಸಾಧನೆ

* ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳಕ್ಕೆ ಮೊದಲನೇ ಸ್ಥಾನ

* ಹಿಂದಿನ ವರ್ಷ 23‌ನೇ ಸ್ಥಾನದಲ್ಲಿದ್ದ ಕೊಪ್ಪಳಕ್ಕೆ ಈ ಬಾರಿ 17ನೇ ಸ್ಥಾನದ ಸಾಧನೆ

*ಪಿಯುಸಿಯಲ್ಲಿ ಪ್ರತಿಶತ 86.08ರಷ್ಟು ಫಲಿತಾಂಶ ದಾಖಲು: ಡಾ.ಸುರೇಶ ಇಟ್ನಾಳ*

ಕೊಪ್ಪಳ ಏಪ್ರೀಲ್ 09 : 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರೀಲ್ 9ರಂದು ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಯು ಪ್ರತಿಶತ 86.08ರಷ್ಟು ಫಲಿತಾಂಶ ದಾಖಲಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ತಿಳಿಸಿದ್ದಾರೆ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ 23‌ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆಯು 2025-26ನೇ ಶೈಕ್ಷಣಿಕ ವರ್ಷದಲ್ಲಿ 17ನೇ‌ ಸ್ಥಾನಕ್ಕೇರಿ ಉತ್ತಮ ಸಾಧನೆ ತೋರಿದೆ.
ಕೊಪ್ಪಳ ಸೇರಿದಂತೆ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಳಗೊಂಡ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೊಪ್ಪಳಕ್ಕೆ ಮೊದಲನೇ ಸ್ಥಾನ ಲಭಿಸಿದ್ದು ಸಂತಷ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಹೊಸದಾಗಿ ಪರೀಕ್ಷೆ ಬರೆದಿದ್ದ ಒಟ್ಟು 13,312 ವಿದ್ಯಾರ್ಥಿಗಳ ಪೈಕಿ 11,555 ವಿದ್ಯಾರ್ಥಿಗಳು ಪಾಸಾಗಿ ಶೇ.86.08ರಷ್ಟು ಫಲಿತಾಂಶ ದಾಖಲಾಗಿ, ಈ ಬಾರಿಯ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯು ಉತ್ತಮ ಸ್ಥಾನ ಕಾಯ್ದುಕೊಂಡಿದೆ.
ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಹೊಸಬರು ಹಾಗೂ ಖಾಸಗಿ ಮತ್ತು ರಿಪೀಟರ್ಸ್ ಸೇರಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 15,503 ಅಭ್ಯರ್ಥಿಗಳ ಪೈಕಿ 12,189 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಥಮ ಬಾರಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಕಲಾ ವಿಭಾಗದಲ್ಲಿ ಶೇ.78.36., ವಾಣಿಜ್ಯ ವಿಭಾಗದಲ್ಲಿ ಶೆ.90.39., ವಿಜ್ಞಾನ ವಿಭಾಗದಲ್ಲಿ ಶೇ.92.72ರಷ್ಟು ಫಲಿತಾಂಶ ದಾಖಲಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸೇರಿ ನಗರ ಪ್ರದೇಶದಲ್ಲಿ ಶೇ.84.64 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.89.99.02ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button