Breking news

ಅಭಿವರ್ಧನೆ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೊಪ್ಪಳದಲ್ಲಿ ಅದ್ಧೂರಿಯಾಗಿ ಉದ್ಘಾಟನೆ

ಅಭಿವರ್ಧನೆ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೊಪ್ಪಳದಲ್ಲಿ ಅದ್ಧೂರಿಯಾಗಿ ಉದ್ಘಾಟನೆ

ಕೊಪ್ಪಳ, [ಮೇ.12]: ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಎಫ್.ಸಿ.ಐ ಗೌಡಾನ್ ಹತ್ತಿರ, ಡಾ. ರಾಮಚಂದ್ರನರಾವ್ ಬಡಾವಣೆ ಎದುರುಗಡೆಯ ವಾಸವಿ ಕಾಂಪ್ಲೆಕ್ಸ್ ನಲ್ಲಿ “ಅಭಿವರ್ಧನೆ ಸೌಹಾರ್ದ ಸಹಕಾರಿ ಸಂಘ ನಿಯಮಿತ”ವು ಇಂದು ಗಣ್ಯರು ಉಧ್ಘಾಟಿಸುವ ಮೂಲಕ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಮೂಲಕ ಅದ್ಧೂರಿಯಾಗಿ ಪ್ರಾರಂಭಗೊಂಡಿತು.

ಸಮಾನ ಮನಸ್ಸಿನ ಸ್ನೇಹಿತರೆಲ್ಲಾ ಒಟ್ಟುಗೂಡಿ ಜನಸಾಮಾನ್ಯರಿಗೂ ಬ್ಯಾಂಕ್ ಸಾಲ ಸೌಲಭ್ಯವನ್ನು ಸುಲಭವಾಗಿ ಒದಗಿಸುವ ಮಹದಾಶಯದೊಂದಿಗೆ ಈ ಸಂಘವನ್ನು ಪ್ರಾರಂಭಿಸಲಾಗಿದೆ. “ಬಡವರು ಕೂಡ ಆರ್ಥಿಕವಾಗಿ ಸಬಲರಾಗಲು ಅಭಿವರ್ಧನೆ ಇದೊಂದು ಉತ್ತಮ ವೇದಿಕೆಯಾಗಲಿದೆ” ಎಂದು ಅಧ್ಯಕ್ಷರಾದ ಶ್ರೀ ಶಿವಾನಂದಪ್ಪ ಯಲ್ಲಮ್ಮನವರು ವಿಶ್ವಾಸ ವ್ಯಕ್ತಪಡಿಸಿದರು. ಉಳಿತಾಯ ಖಾತೆ ಮತ್ತು ಹೂಡಿಕೆದಾರರಿಗೆ ಆಕರ್ಷಕ ಬಡ್ಡಿದರ ,ಕೃಷಿ, ವಾಣಿಜ್ಯ, ವಾಹನ, ಗೃಹ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯ ,ಆಧುನಿಕ ಡಿಜಿಟಲ್ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಸೇವೆಯನ್ನು ಇಂದಿನಿಂದ ಆರಂಭಿಸುತ್ತಿದ್ದೇವೆ ಎಂದು ಸದಸ್ಯರು ತಿಳಿಸಿದರು.

ಪ್ರಾರಂಭೋತ್ಸವ ಸಮಾರಂಭದಲ್ಲಿ ಅನೇಕ ಗಣ್ಯರು, ಪೂಜ್ಯರು ಮತ್ತು ವಿವಿಧ ಕ್ಷೇತ್ರದ ಮುಖಂಡರು ಆಗಮಿಸಿ ಸಂಘದ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ದೇಶಿಯ ಉಡುಗೆಯನ್ನುಟ್ಟು ಆಗಮಿಸಿದ್ದ ಆಡಳಿತ ನಿರ್ದೇಶಕ ಮಂಡಳಿಯು ಗ್ರಾಹಕರಿಗೆ “ಅಭಯ ಹಸ್ತ” ನೀಡಿ, ಸಂಘದ ಸೇವೆಗಳ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿಕೊಂಡಿತು

ಇದೇ ವೇಳೆ ಸಂಸದರಾದ ರಾಜಶೇಖರ ಹಿಟ್ನಾಳ, ಅಧ್ಯಕ್ಷರಾದ ಶಿವಾನಂದ ಯಲ್ಲಮ್ಮನವರು  ಉಪಾಧ್ಯಕ್ಷರಾದ ಗಿರಿಧರ ನದಿಚಾಗಿ,ಶಿವಶಂಕರಪ್ಪ ವಾಲಿಕಾರ, ನಿರ್ದೇಶಕರಾದ ಯಂಕಪ್ಪ ಬನ್ನಿಗಿಡದ, ರಮೇಶ ಹೊಳೆಯಾಚಿ,ಮುರಳಿಧರ ಬಸರಿಹಾಳ, ಶರಣಪ್ಪ ಅಬ್ಬಿಗೇರಿ,ಭೀಮಪ್ಪ ಕಿತ್ತೂರ,ರಾಮು ಎಲ್. ಪೂಜಾರಿ, ಶ್ರೀ ಬಸವರಾಜ ಅಗಸಿಮನಿ ಉಪಸ್ಥಿತಿ ಇದ್ದರು. ಎಲ್ಲಾ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಿದ್ದು, ಕೊಪ್ಪಳ ಹಾಗೂ ಸುತ್ತಮುತ್ತಲಿನ ಜನರು ಇದರ ಪ್ರಯೋಜನ ಪಡೆಯಬೇಕೆಂದು ಸಂಘದ ಸದಸ್ಯರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button