Breking news

ಜಗತ್ತಿಗೆ ರೆಡ್ ಕ್ರಾಸ್ ಕೊಡುಗೆ ಅಪಾರ: ಅಧ್ಯಕ್ಷ ಶ್ರೀ ಸೋಮರೆಡ್ಡಿ ಅಳವಂಡಿ.

ಜಗತ್ತಿಗೆ ರೆಡ್ ಕ್ರಾಸ್ ಕೊಡುಗೆ ಅಪಾರ: ಅಧ್ಯಕ್ಷ ಶ್ರೀ ಸೋಮರೆಡ್ಡಿ ಅಳವಂಡಿ.

ಕೊಪ್ಪಳ.08 ಇಂದಿನ ಯುವಕರು ದೇಶಕ್ಕೆ ಏನಾದರೂ ಕೊಡಗೆ ಸಲ್ಲಿಸುವುದಾದರೆ ನಿಮ್ಮ ಅಕ್ಕಪಕ್ಕದ ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಸಾಕು ಅದು ದೇಶಕ್ಕೆ ಕೊಡುಗೆ ನೀಡಿದಂತೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಕೊಪ್ಪಳದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ನಿಮಿತ್ತವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇವತ್ತಿನ ಯುವ ಜನತೆ ದೇಶಕ್ಕೆ ಏನಾದರೂ ಸೇವೆ ಸಲ್ಲಿಸುವದಿದ್ದರೆ ಮಾನವೀಯ ಮೌಲ್ಯಗಳೊಂದಿಗೆ ದಿನಂಪ್ರತಿ ನಿಮ್ಮ ಸುತ್ತಮುತ್ತ ನಡೆಯುವ ಘಟನೆಗಳಿಗೆ ಸ್ಪಂದಿಸಿ ಅಂತಹ ಘಟನೆಯಲ್ಲಿ ಸಿಲುಕಿದ ವ್ಯಕ್ತಿಗಳಿಗೆ ನೀವು ಉಪಚರಿಸುವುದರ ಮೂಲಕ ಸೇವೆಯನ್ನು ಸಲ್ಲಿಸಿದಂತಾಗುತ್ತದೆ. ಅದೇ ರೀತಿ ನೀವು ರೆಡ್ ಕ್ರಾಸ್ ಸಂಸ್ಥೆಯಲ್ಲಿ ತೊಡಗಿಸಿ ಕೊಂಡು ಹಲವಾರು ಸೇವೆಗಳನ್ನು ಮನುಕುಲಕ್ಕೆ ಸಲ್ಲಿಸಬಹುದು ಏಕೆಂದರೆ ರೆಡ್ ಕ್ರಾಸ್ ಸಂಸ್ಥೆಗೆ ಜಾತಿ ಧರ್ಮ ಮತ ಪಂಥ ದೇಶ ಗಳ ಕುರಿತು ತಾರತಮ್ಯವಿರುವುದಿಲ್ಲ ಇವುಗಳಿಂದ ಮುಕ್ತವಾಗಿ ದೇಶ ಸೇವೆಯನ್ನು ಹಾಗೂ ಮಾನವ ಕುಲದ ಸೇವೆಯನ್ನು ಮಾಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿರುತ್ತದೆ. ಸಂಸ್ಥೆಯ ಉದ್ದೇಶ ಶಾಂತಿಯುತವಾಗಿ ವಿಪತ್ತುಗಳ ಸಂದರ್ಭದಲ್ಲಿ, ಯುದ್ಧದ ಸಂದರ್ಭಗಳಲ್ಲಿ ಇನ್ನೂ ಮುಂತಾದ ಸಮಯದಲ್ಲಿ ಜನರಿಗೆ ಸೇವೆಯನ್ನು ಸಲ್ಲಿಸುವುದು ಮತ್ತು ಉಪಚರಿಸುವ ಕಾರ್ಯವನ್ನು ಸಂಸ್ಥೆಯು ಮಾಡುತ್ತದೆ. ಸಂಸ್ಥೆಯಿಂದ ಯಾವುದೇ ಫಲಾಪೇಕ್ಷೆಯನ್ನು ನಿರೀಕ್ಷಿಸದೆ ಯುವಕರು ಸೇವೆಯನ್ನು ಸಲ್ಲಿಸಬಹುದು. ನಮ್ಮ ಜಿಲ್ಲಾ ಶಾಖೆಯು ಮೂರು ಬಾರಿ ರಾಜ್ಯಪಾಲರ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಅತಿ ಹೆಚ್ಚು ರಕ್ತ ಸಂಗ್ರಹಣೆಗೆ ದೇಶಕ್ಕೆ ಮಾದರಿಯಾದ ಜಿಲ್ಲೆಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ ಮಂಜುನಾಥ್ ಬಿ ಸಜ್ಜನ್ ಉಪಸಭಾಪತಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳ ಇವರು ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯ ಕೊಡುಗೆ ವಿಶ್ವಕ್ಕೆ ಅತ್ಯಂತ ಶ್ರೇಷ್ಠವಾದದ್ದು. ಇದು ಮಾನವನ ಜೀವನದಲ್ಲಿ ಮಾನವೀಯತೆಯ ಮೌಲ್ಯ ಗಳನ್ನು ಹುಟ್ಟುಹಾಕುವದರೊಂದಿಗೆ ಸ್ವಯಂ ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ. ಯುದ್ಧದ ಸಂದರ್ಭದಲ್ಲಿ ಜನರು ಭಯಭೀತರಾಗಿ ಪಲಾಯನ ಮಾಡುವಾಗ ಅಲ್ಲಿ ಗಾಯಾಳುಗಳಿಗೆ ಉಪಚರಣೆಯನ್ನು ಮಾಡುವ ಪ್ರಥಮ ಸಂಸ್ಥೆ ಇದಾಗಿರುತ್ತದೆ. ನೀವು ಸಹ ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಸೇರಿಕೊಂಡು ನೈಸರ್ಗಿಕ ವಿಪತ್ತುಗಳ ಸಂಭವಿಸಿದಾಗ ಅದರಲ್ಲಿ ಪಾಲ್ಗೊಂಡು ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬಹುದು. ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಕೇವಲ ರಕ್ತ ಬಂಡಾರವಾಗಿ ಕಾರ್ಯನಿರ್ವಹಿಸದೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಮಾನವೀಯತೆ ಯೊಂದಿಗೆ ಸಮಾಜದಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಿ ಒಂದು ಆರೋಗ್ಯಯುತವಾದ ಉತ್ತಮ ಸಮಾಜವನ್ನು; ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ. ರೆಡ್ ಕ್ರಾಸ್ ಸಂಸ್ಥೆಯು ಮಾನವೀಯತೆ, ಸ್ವಾತಂತ್ರ್ಯ, ನಿಷ್ಪಕ್ಷಪಾತ, ತಟಸ್ಥತೆ, ಸ್ವಯಂಸೇವೆ, ಏಕತೆ ಮತ್ತು ಸಾರ್ವತ್ರಿಕ ವಾದ ಮೂಲಭೂತ ತತ್ವಗಳೊಂದಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಶ್ರೀ ಬಸವರಾಜ ಎಸ್.ಎಂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ 1859 ರಲ್ಲಿ ಇಟಲಿ ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಗಳ ನಡುವೆ ಯುದ್ಧ ನಡೆದಾಗ ಸಾಕಷ್ಟು ಸೈನಿಕರು ಮತ್ತು ಜನರು ಯುದ್ಧದ ಭೀತಿಯಿಂದಾಗಿ ಗಾಯಗೊಂಡಾಗ ಮತ್ತು ಮೃತರಾದಾಗ ಅವರನ್ನು ಉಪಚರಿಸುವ ವ್ಯಕ್ತಿಗಳು ಯಾರು ಇರಲಿಲ್ಲ, ಆಗ ನೆಪೋಲಿಯನ್ ಜೊತೆ ವ್ಯವಹಾರಕ್ಕಾಗಿ ಚರ್ಚಿಸಲು ಯುವ ವ್ಯಾಪಾರಸ್ಥ ಸರ್ ಜಿನ್ ಹೆನ್ರಿ ಡ್ಯೂನೆಂಟ್ ರವರು ಆಗಮಿಸುವಾಗ ಆ ಗಾಯಗೊಂಡವರನ್ನು ನೋಡಿ ಅಲ್ಲೇ ಅವರು ಉಪಚರಿಸಲ್ಪಟ್ಟರು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಲ್ಪಟ್ಟರು ನಂತರ 1863 ರಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಜಿನೇವಾದಲ್ಲಿ ಸ್ಥಾಪಿಸಲ್ಪಟ್ಟರು. ನಂತರ ಇದು ವಿಶ್ವದ್ಯಂತ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯಾಗಿ ಬೆಳೆಯಲ್ಪಟ್ಟಿತು. ಭಾರತದಲ್ಲಿ 1920 ರಲ್ಲಿ ಮತ್ತು ಕರ್ನಾಟಕದಲ್ಲಿ 1921 ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಿತವಾಯಿತು. ಈ ಸಂಸ್ಥೆಯು ಮುಖ್ಯವಾಗಿ 7 ಮೂಲಭೂತ ತತ್ವಗಳನ್ನು ಒಳಗೊಂಡಿರುತ್ತದೆ. ಪ್ರತಿ ವರ್ಷ ಮೇ 8ನೇ ತಾರೀಕಿನಂದು ಸರ್ ಹೆನ್ರಿ ಡ್ಯೂನೆಂಟ್ ರವರ ಜನ್ಮದಿನವನ್ನು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಯನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣವನ್ನು ಶ್ರೀಮತಿ ಉಷಾದೇವಿ ಹಿರೇಮಠ ಪ್ರಾಚಾರ್ಯರು ಮಾತನಾಡುತ್ತಾ ಯಾವುದೇ ಪ್ರದೇಶದಲ್ಲಿ ಭೂಕಂಪ, ನೈಸರ್ಗಿಕ ವಿಪತ್ತು ಅಥವಾ ಮಾನವ ನಿರ್ಮಿತ ವಿಪತ್ತು ಉದ್ಭವಿಸಿದರೆ ಅಲ್ಲಿ ಗೋಚರಿಸುವುದು ರೆಡ್ ಕ್ರಾಸ್ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಯ ಚಿಹ್ನೆಯೊಂದಿಗೆ ಸೇವೆ ಮಾಡುವಾಗ ಯಾವುದೇ ರೀತಿಯ ಅಂತ ಸೇವಕರಿಗೆ ದಾಳಿಗಳನ್ನು ಮಾಡುವುದಿಲ್ಲ, ಹಲವಾರು ವಿಪತ್ತುಗಳು ಸಂಭವಿಸಿದಾಗ ನಮ್ಮ ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆಯಿಂದಲೂ ಸಹ ಸಾಕಷ್ಟು ಸೇವೆಯನ್ನು ಸಲ್ಲಿಸಲಾಗಿದೆ. ಸೇವೆ ಸಲ್ಲಿಸುವುದು ಎಂದರೆ ನಿಮ್ಮ ಸುತ್ತಮುತ್ತ ಉಂಟಾಗುವ ವಿಪತ್ತುಗಳಿಗೂ, ಅಪಾಯಗಳಿಗೂ ಸಹ ನೀವು ಸಹಾಯವನ್ನು ಮಾಡಬಹುದು ಅದು ಕೂಡ ಸೇವೆಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಯು.ಎಸ್ ಸೊಪ್ಪಿ ಮಠ ಉಪನ್ಯಾಸಕರು, ಶ್ರೀ ಸೋಮಶೇಖರ್ ರಾಜು ಯು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ A ಪ್ರಗತಿ ಸ್ವಾಗತಿಸಿದರು, ಶ್ರೀಮತಿ ಸೌಮ್ಯ ನಾಲ್ವಾಡ ಪ್ರಾರ್ಥಿಸಿದರು, ಕುಮಾರ ಬಸವರಾಜ್ ಘರ್ಜಿನಾಳ ವಂದಿಸಿದರು, ನಿರೂಪಣೆಯನ್ನು ಕುಮಾರ ಸಂಕಲ್ಪ ನೆರವೇರಿಸಿದರು.

Related Articles

Leave a Reply

Your email address will not be published. Required fields are marked *

Back to top button