Breking news

ಕುಡಿವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ

ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಸೂಚನೆ

*ಕುಡಿವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ*

*ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಸೂಚನೆ*

*ಗಂಗಾವತಿಯಲ್ಲಿ ತಾಲೂಕು ವಿಪತ್ತು ನಿರ್ವಹಣೆ ಸಭೆ*

*ಗಂಗಾವತಿ* : ತಾಲೂಕಿನಲ್ಲಿ ಪ್ರಸ್ತುತ 27 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವ ಆಗಬಹುದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮುಂಜಾಗ್ರತ ಕ್ರಮಕೈಗೊಂಡು ನೀರಿನ ಸಮಸ್ಯೆ ತ್ವರಿತವಾಗಿ ಬಗೆಹರಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಾಲೂಕು ನೋಡಲ್ ಅಧಿಕಾರಿಗಳಾದ ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಸೂಚನೆ ನೀಡಿದರು.

ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಮಂಗಳವಾರ ನಡೆದ ತಾಲೂಕು ವಿಪತ್ತು ನಿರ್ವಹಣೆ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದರು.

ಸಾರ್ವಜನಿಕರಿಂದ ಯಾವುದೇ ರೀತಿಯ ಕುಡಿಯುವ ನೀರಿನ ದೂರುಗಳು ಬರದಂತೆ ಗ್ರಾಮಗಳಲ್ಲಿ ಸ್ಥಾನಿಕ ವಿಚಾರಣೆ ಮಾಡಿ ಮುಂಜಾಗ್ರತೆಯಾಗಿ ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಪರಿಹರಿಬೇಕು. ತಾಲೂಕು ಅಧಿಕಾರಿಗಳು, ಆರ್ ಡಬ್ಲ್ಯುಎಸ್ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಸಮಸ್ಯೆ ಬರುವ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ತೊಂದರೆ ಆಗದಂತೆ ನಿಗಾವಹಿಬೇಕು ಎಂದು ಸೂಚನೆ ನೀಡಿದರು.

ಗಂಗಾವತಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಈಗಾಗಲೇ 16 ಬೋರ್ ವೆಲ್ ಗಳನ್ನು ಬಾಡಿಗೆ ಪಡೆಯಲಾಗಿದೆ. ಈಗಾಗಲೇ ಇನ್ನೂ ಹೆಚ್ಚುವರಿಯಾಗಿ 32 ಬೋರ್ ವೆಲ್ ಗಳನ್ನು ಗುರುತಿಸಲಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದರೆ ಈ ಬೋರ್ ವೆಲ್ ಗಳನ್ನು ಬಾಡಿಗೆ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದರು.

ತಹಸೀಲ್ದಾರ್ ವಿಶ್ವನಾಥ ಮುರಡಿ ಅವರು ಮಾತನಾಡಿ, ಮೇ ಮತ್ತು ಜೂನ್ ನಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಹಾಯವಾಣಿ ಆರಂಭಿಸಲಾಗಿದೆ. ಯಾವುದೇ ದೂರುಗಳು ಬರದಂತೆ ಕೆಲಸ ಮಾಡಬೇಕು. ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಜೊತೆಗೆ ಮಳೆ, ಗಾಳಿಗೆ ಏನಾದರೂ ಅನಾಹುತಗಳು ನಡೆದರೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ 75 ಆರ್ ಓ ಪ್ಲಾಂಟ್ ಗಳಿದ್ದು, ಇದರಲ್ಲಿ 16 ಮಾತ್ರ ಸುಸ್ಥಿತಿಯಲ್ಲಿ ಇರುತ್ತವೆ. ತಾಂತ್ರಿಕ ಸಮಸ್ಯೆ ಇಲ್ಲದ ಆರ್ ಓ ಪ್ಲಾಂಟ್ ಗಳನ್ನು ರಿಪೇರಿ ಮಾಡಿಸಿ ಆರಂಭಿಸಬೇಕು. ಆರ್ ಡಬ್ಲ್ಯುಎಸ್ ನಿಂದ ಗ್ರಾಮ ಪಂಚಾಯತ್ ಗಳಿಗೆ ಆರ್ ಓ ಪ್ಲಾಂಟ್ ಗಳು ಹಸ್ತಾಂತರ ಆಗಬೇಕು. ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಂದರೆ ತ್ವರಿತವಾಗಿ ಟ್ಯಾಂಕರ್ ಮೂಲಕ ಅಥವಾ ಅಕ್ಕಪಕ್ಕದ ಜಮೀನುಗಳ ಬೋರ್ ವೆಲ್ ಗಳ್ನನು ಗುತ್ತಿಗೆ ಪಡೆದು ನೀರು ಪೂರೈಸಬೇಕು. ಯಾವುದೇ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಬಾರದು ಎಂದು ತಿಳಿಸಿದರು.

ಗಂಗಾವತಿ ನಗರದಲ್ಲಿ 10 ಆರ್ ಓ ಪ್ಲಾಂಟ್ ಗಳು ಇದ್ದು, ಇದರಲ್ಲಿ 8 ಮಾತ್ರ ಸುಸ್ಥಿತಿಯಲ್ಲಿದ್ದು ಕೆಲಸ ಮಾಡುತ್ತಿವೆ. 2 ಆರ್ ಓ ಪ್ಲಾಂಟ್ ಗಳು ಹಾಳಾಗಿ ಹೋಗಿವೆ. ನಗರದಲ್ಲಿ 248 ಸಿಸ್ಟಂ ಟ್ಯಾಂಕ್ ಗಳು, ಸಾರ್ವಜನಿಕ ನಲ್ಲಿಗಳು ಇದ್ದು, ಯಾವುದೇ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ನಗರಸಭೆ ಪೌರಾಯುಕ್ತರಾದ ಆರ್. ವಿರುಪಾಕ್ಷಮೂರ್ತಿ ಅವರು ಸಭೆಯಲ್ಲಿ ತಿಳಿಸಿದರು.

*ಸಮಸ್ಯೆ ಆಲಿಸಿದ ನೋಡಲ್ ಆಫೀಸರ್* : ಗಂಗಾವತಿ ತಾಲೂಕಿನ 18 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಹಾಗೂ ಗಂಗಾವತಿಯ ನಗರದ ವಿವಿಧ ವಾರ್ಡ್ ಗಳಲ್ಲಿ ಇರುವ ನೀರಿನ ವ್ಯವಸ್ಥೆ ಹಾಗೂ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಹಾಗೂ ಇರುವ ಬೋರ್ ವೆಲ್ ಗಳ ಕಾರ್ಯನಿರ್ವಹಣೆ ಕುರಿತು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಮಾಹಿತಿ ಪಡೆದು, ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.

ಆರ್ ಡಬ್ಲ್ಯುಎಸ್ ಎಇಇ ದೇವಣ್ಣ ಕಟ್ಟಿ, ನಗರಸಭೆ ಪೌರಾಯುಕ್ತರಾದ ವಿರುಪಾಕ್ಷಮೂರ್ತಿ, ಗ್ರೇಡ್ ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ತಾಲೂಕಿನ ಎಲ್ಲಾ ಕಂದಾಯ ನಿರೀಕ್ಷಕರು, 18 ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಸೇರಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button